
ಪ್ರಜಾವಾಣಿ ವಾರ್ತೆ
ಗೋಕರ್ಣ: ಇಲ್ಲಿಯ ಮೇನ್ ಬೀಚ್ ಸಮುದ್ರದಲ್ಲಿ ಈಚೆಗೆ ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ಝೆಕ್ ರಿಪಬ್ಲಿಕ್ ದೇಶದ ಮಿಲೋಸ್ಲಾವ ಹೋರಾಕೋವಾ (78) ಎಂಬ ಮಹಿಳೆಯರ ಚಿತಾಭಸ್ಮವನ್ನು ಸ್ನೇಹಿತರು ಬುಧವಾರ ಸಮುದ್ರದಲ್ಲಿ ಪೂಜೆ ಸಲ್ಲಿಸಿ ವಿಸರ್ಜಿಸಿದರು. ಶ್ರದ್ಧಾಂಜಲಿ ಅರ್ಪಿಸಿದರು.
ಝೆಕ್ ರಿಪಬ್ಲಿಕ್ ದೇಶದ ರಾಯಭಾರಿ ಕಚೇರಿಗೆ ವಿಷಯ ತಿಳಿಸಿ, ಅವರ ವಾರಸುದಾರರ ಒಪ್ಪಿಗೆ ಮೇರಿಗೆ ಶವದ ಮರಣೋತ್ತರ ಪರೀಕ್ಷೆ ಕಾರವಾರದಲ್ಲೇ ನಡೆಸಲಾಯಿತು. ಉದ್ಯಮಿ ನಿತ್ಯಾನಂದ ಶೆಟ್ಟಿ ಅಂತ್ಯಕ್ರಿಯೆ ನೆರವೇರಿಸಿದರು. ಚಿತಾಭಸ್ಮವನ್ನು ಮಹಿಳೆಯ ಗೆಳೆಯ ಸ್ವಿಟ್ಜರ್ಲೆಂಡ್‌ನ ರೂಡಲ್ಪ ಬುಧವಾರ ಮುಕ್ತಿ ಕ್ಷೇತ್ರ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಿದರು.