ADVERTISEMENT

ವೈರಲ್‌ ಆಗಿರುವ ಹುಲಿಗಳ ವಿಡಿಯೊ ಅಸ್ನೋಟಿಯದ್ದಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 13:01 IST
Last Updated 12 ಅಕ್ಟೋಬರ್ 2020, 13:01 IST
ಮುಂದೆ ಹೋಗುತ್ತಿರುವ ಹುಲಿಯನ್ನು ಮೂರು ಹುಲಿಗಳು ಹಿಂಬಾಲಿಸುತ್ತಿರುವುದು
ಮುಂದೆ ಹೋಗುತ್ತಿರುವ ಹುಲಿಯನ್ನು ಮೂರು ಹುಲಿಗಳು ಹಿಂಬಾಲಿಸುತ್ತಿರುವುದು   

ಕಾರವಾರ: ಒಂದೇ ಬಾರಿಗೆ ನಾಲ್ಕು ಹುಲಿಗಳು ಪೊದೆಗಳ ನಡುವೆ ಮೆಲ್ಲನೆ ಹೆಜ್ಜೆ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಕಾರವಾರ ಸಮೀಪದ ಅಸ್ನೋಟಿ ರೈಲು ನಿಲ್ದಾಣದ ಸಮೀಪ ಅವು ಕಾಣಿಸಿಕೊಂಡಿವೆ ಎಂದು ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿ ಹೇಳಲಾಗಿತ್ತು.

ಒಂದು ಹುಲಿ ಮುಂದೆ ಸಾಗುತ್ತಿದ್ದರೆ, ಉಳಿದ ಮೂರು ಹಿಂಬಾಲಿಸುತ್ತವೆ. ನಾಲ್ಕು ಹುಲಿಗಳು ಒಟ್ಟಿಗೇ ಕಾಣಸಿಗುವ ಅಪರೂಪದ ದೃಶ್ಯವನ್ನು ಯಾರೋ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಅಸ್ನೋಟಿಯಲ್ಲಿ ಹುಲಿಗಳು ಕಂಡುಬಂದಿಲ್ಲ. ವೈರಲ್ ಆಗಿರುವ ವಿಡಿಯೊ ಈ ಭಾಗದ್ದಲ್ಲ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.