ADVERTISEMENT

ಗೋಕರ್ಣ: ನಾಯಿಗೆ ಮಾರಣಾಂತಿಕ ಹೊಡೆತ; ದೂರು ನೀಡಿದ ವಿದೇಶಿ ಮಹಿಳೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:25 IST
Last Updated 8 ಜನವರಿ 2026, 7:25 IST
   

ಗೋಕರ್ಣ: ಇಲ್ಲಿಯ ಮೇನ್ ಬೀಚಿನ ಸೂರ್ಯ ರೆಸ್ಟೋರೆಂಟ್ ಹಿಂದುಗಡೆ ವಾಸಿಸುತ್ತಿದ್ದವರು ಅನಾಗರಿಕವಾಗಿ ನಾಯಿಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ ಎಂದು ವಿದೇಶಿ ಮಹಿಳೆಯೊಬ್ಬರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಐರ್ಲೆಂಡಿನ ಯವೊನ್ನೆ ಮೆರಿ ಮೋರನ್ ಎಂಬ ಮಹಿಳೆ ದೂರು ದಾಖಲಿಸಿದ್ದಾರೆ. ಇವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದು ಐರ್ಲೆಂಡಿನ ರಾಷ್ಟ್ರೀಯ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದಾರೆ.

ನಾಯಿಗೆ ಅನಾಗರಿಕವಾಗಿ ಹೊಡೆದವರ ಮೇಲೆ ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಗಂಭೀರವಾಗಿ  ಗಾಯಗೊಂಡ ನಾಯಿಗೆ ಗೋವಾ ರಾಜ್ಯದ ಕಾಣಕೋಣದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸಾವಿರಾರು ರೂಪಾಯಿ ಖರ್ಚಾಗಿದೆ.  

ADVERTISEMENT

ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.