ADVERTISEMENT

ಗೋಕರ್ಣದ ಕಾವ್ಯಶ್ರೀ ಕಮರ್ಷಿಯಲ್ ಪೈಲಟ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:16 IST
Last Updated 4 ನವೆಂಬರ್ 2025, 7:16 IST
ಕಾವ್ಯಶ್ರೀ ಕೂರ್ಸೆ 
ಕಾವ್ಯಶ್ರೀ ಕೂರ್ಸೆ    

ಗೋಕರ್ಣ: ಮೂಲತಃ ಗೋಕರ್ಣದ, ಸದ್ಯ ಗೋವಾದಲ್ಲಿ ನೆಲೆಸಿರುವ ಕಾವ್ಯಶ್ರೀ ಕೂರ್ಸೆ ತಮ್ಮ 21ನೇ ವಯಸ್ಸಿನಲ್ಲಿಯೇ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆದ್ದಾರೆ.

ಕಾವ್ಯಶ್ರೀ ಮಹಾರಾಷ್ಟದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಒಟ್ಟು 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

‘ಬಾಲ್ಯದಿಂದಲೇ ವಿಮಾನ ಯಾನ ಕ್ಷೇತ್ರದ ಮೇಲೆ ಕಾವ್ಯಶ್ರೀಗೆ ಆಸಕ್ತಿ ಇತ್ತು. ಕನಸನ್ನು ಸಾಕರಗೊಳಿಸಲು ಪಟ್ಟಿದ್ದ ನಿರಂತರ ಪರಿಶ್ರಮಕ್ಕೆ ಫಲ ದೊರೆತಿದೆ. ಅವರ ಈ ಸಾಧನೆ ಕುಟುಂಬದವರಿಗಷ್ಟೇ ಅಲ್ಲದೆ ಜಿಲ್ಲೆಗೆ ಮಾದರಿಯಾಗಿದೆ’ ಎಂದು ಕಾವ್ಯಶ್ರೀ ಕುಟುಂಬ ಹೇಳಿದೆ.

ADVERTISEMENT

ಈಕೆ ಶ್ಯಾಮಲಾ ಮತ್ತು ಲಕ್ಷ್ಮೀನಾರಾಯಣ ಕೋರ್ಸೆ ದಂಪತಿಯ ಪುತ್ರಿಯಾಗಿದ್ದು. ತಂದೆ ಗೋವಾದಲ್ಲಿ ವೈದಿಕ ವೃತ್ತಿ ಮಾಡುತ್ತಿದ್ದಾರೆ.

ಕಮರ್ಷೀಯಲ್ ಪೈಲಟ್ ಆದ ಗೋಕರ್ಣ ಮೂಲದ ಕಾವ್ಯಶ್ರೀ ಕೂರ್ಸೆ. ತಂದೆ ತಾಯಿಯೊಂದಿಗೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.