
ಹಳಿಯಾಳ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ಸೊಂದು ಗುರುವಾರ ಬೆಳಿಗ್ಗೆ ತಾಲ್ಲೂಕಿನ ಬಾಣಸಗೇರಿ ಗ್ರಾಮದ ಹತ್ತಿರದ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ 34 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಸ್ ಚಾಲಕ ಹಾಗೂ 7 ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೋಗನಕೊಪ್ಪ ಗ್ರಾಮದಿಂದ ಸುಮಾರು 40 ಪ್ರಯಾಣಿಕರನ್ನು ಹೊತ್ತ ಬಸ್ ಹಳಿಯಾಳಕ್ಕೆ ಬರುವಾಗ ಬಾಣಸಗೇರಿ ಮೊರಾರ್ಜಿ ವಸತಿ ಶಾಲೆಯ ಹತ್ತಿರದಲ್ಲಿ ಮರಕ್ಕೆ ಢಿಕ್ಕಿ ಹೊಡೆದಿದೆ. ಹಳಿಯಾಳದ ವಿವಿಧ ಶಾಲೆಗಳಿಗೆ ತೆರಳುತ್ತಿದ್ದ ಸುಮಾರು 34 ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಚಾಲಕನ ಪಕ್ಕದ ಆಸನದಲ್ಲಿ ಕುಳಿತ್ತಿದ್ದ 4ನೇ ತರಗತಿಯ ವಿದ್ಯಾರ್ಥಿ ಸಿಮಂತ ಮಹಾಂತೇಶ ಕಮ್ಮಾರನ ಎರಡೂ ಕಾಲುಗಳು ಬಸ್ಸಿನೊಳಗೆ ಸಿಕ್ಕಿಹಾಕಿಕೊಂಡಿದ್ದವು. ಜಿಸಿಬಿಯಿಂದ ಬಸ್‌ನ್ನು ಗಿಡದಿಂದ ಮೆಲಕ್ಕೆತ್ತಿ, ನುರಿತ ತಜ್ಞರಿಂದ ಬಸ್ಸಿನ ಮುಂಭಾಗವನ್ನು ಕತ್ತರಿಸಿ ಮೂರು ಗಂಟೆಯ ನಂತರ ವಿದ್ಯಾರ್ಥಿಯನ್ನು ಹೊರಗೆ ತೆಗೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.