ADVERTISEMENT

ಬೆಳಗಾವಿ ಅಧಿವೇಶನ: ಹಳಿಯಾಳ ವಿದ್ಯಾರ್ಥಿಗಳಿಂದ ಕಲಾಪ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:44 IST
Last Updated 13 ಡಿಸೆಂಬರ್ 2025, 4:44 IST
ಬೆಳಗಾವಿಯ ಸುವರ್ಣ ಸೌಧಕ್ಕೆ ಹಳಿಯಾಳದ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳು ಭೇಟಿ ನೀಡಿ ಶಾಸಕ ಆರ್‌.ವಿ. ದೇಶಪಾಂಡೆ ಅವರೊಂದಿಗೆ ಚರ್ಚಿಸಿದರು
ಬೆಳಗಾವಿಯ ಸುವರ್ಣ ಸೌಧಕ್ಕೆ ಹಳಿಯಾಳದ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳು ಭೇಟಿ ನೀಡಿ ಶಾಸಕ ಆರ್‌.ವಿ. ದೇಶಪಾಂಡೆ ಅವರೊಂದಿಗೆ ಚರ್ಚಿಸಿದರು   

ಹಳಿಯಾಳ: ಪಟ್ಟಣದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ವೀಕ್ಷಿಸಿದರು.

ವಿದ್ಯಾರ್ಥಿಗಳಿಗೆ ಶಾಸಕಾಂಗದ ಕಾರ್ಯವಿಧಾನ, ವಿಧಾನಮಂಡಲದ ಮಹತ್ವ ಹಾಗೂ ಅಧಿವೇಶನದ ಸಂದರ್ಭದಲ್ಲಿ ನಡೆಯುವ ಚರ್ಚೆಗಳ ಕುರಿತು ಶಾಸಕ ಆರ್‌.ವಿ. ದೇಶಪಾಂಡೆ ವಿವರಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿ, ವಿಧಾನಸಭಾ ಕಲಾಪದ ಸಂಕ್ಷಿಪ್ತ ಪರಿಚಯವನ್ನೂ ನೀಡಿ ಉತ್ತಮ ನಾಗರಿಕರಾಗಿ ಬೆಳೆಯುವಲ್ಲಿ ಸಂವಿಧಾನಿಕ ಮೌಲ್ಯಗಳ ಅರಿವು, ಜಾಗೃತಿ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯ ಗೌರವದ ಅಗತ್ಯತೆಯ ಕುರಿತು ವಿವರಿಸಿದರು.

ಶಾಲಾ ಶಿಕ್ಷಕಿ ನೆಲ್ಸಿ ಫರ್ನಾಂಡಿಸ್, ಮಲ್ಲಿಕಾರ್ಜುನ ಗೌಡ ಹುಳ್ಳೂರ್, ಡಿಪಿಐಟಿಐ ಪ್ರಾಚಾರ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.