ADVERTISEMENT

ಕಾರವಾರ | ಸೂರ್ಯನ ಸುತ್ತ ಉಂಗುರ!

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 11:51 IST
Last Updated 23 ಜುಲೈ 2020, 11:51 IST
ಸೂರ್ಯನ ಸುತ್ತ ಗುರುವಾರ ಉಂಟಾದ ‘ಹ್ಯಾಲೊ’, ಕ್ಯಾಮೆರಾದಲ್ಲಿ ಈ ರೀತಿ ಸೆರೆಯಾಯಿತು. ಚಿತ್ರ: ರಾಘವೇಂದ್ರ.
ಸೂರ್ಯನ ಸುತ್ತ ಗುರುವಾರ ಉಂಟಾದ ‘ಹ್ಯಾಲೊ’, ಕ್ಯಾಮೆರಾದಲ್ಲಿ ಈ ರೀತಿ ಸೆರೆಯಾಯಿತು. ಚಿತ್ರ: ರಾಘವೇಂದ್ರ.   

ಕಾರವಾರ: ನಗರದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಕಾಶದತ್ತ ನೋಡಿದವರಿಗೆ ಅಚ್ಚರಿ ಕಾದಿತ್ತು. ಸೂರ್ಯನ ಸುತ್ತ ಬಿಳಿಯ ಬಣ್ಣ ಬಣ್ಣದ ಉಂಗುರ ರಚನೆಯಾಗಿ ಗಮನ ಸೆಳೆಯಿತು.

ಘನೀಕೃತ ನೀರಿನ ಕಣಗಳ (ಮಂಜುಗಡ್ಡೆ) ಮೂಲಕ ಬೆಳಕು ಹಾದು ಹೋದಾಗ ಉಂಟಾಗುವ ಈ ಸಾಮಾನ್ಯ ವಿದ್ಯಮಾನಕ್ಕೆ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಮೋಡಗಳು ಚಲಿಸುತ್ತ ಸೂರ್ಯನ ಸುತ್ತ ಬಂದಾಗ ಈ ರೀತಿ ಕಾಣಿಸುವ ಸಾಧ್ಯತೆಯಿದೆ.

‘ವರ್ಷದಲ್ಲಿ ಎಷ್ಟು ಸಲ ಬೇಕಾದರೂಈ ರೀತಿಯ ಉಂಗುರದ ಮಾದರಿಯ ರಚನೆಗಳಾಗಬಹುದು. ಇದಕ್ಕೆ ವಾತಾವರಣವೇ ಕಾರಣ. ಘನೀಕೃತ ನೀರಿನ ಮೂಲಕ ಬೆಳಕು ಹಾದುಹೋದಾಗ ಬೆಳಕಿನ ವಿಭಜನೆಯಾಗುತ್ತದೆ. ಆಗ ಕಾಮನಬಿಲ್ಲಿನ ರೀತಿಯಲ್ಲೇ ಸೂರ್ಯನ ಸುತ್ತ ರಚನೆಯೊಂದು ಗೋಚರಿಸುತ್ತದೆ’ ಎಂದು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌತವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಐ.ಕೆ.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.