ADVERTISEMENT

ವಾರಾಣಸಿ: ಲೌಡ್ ಸ್ಪೀಕರ್‌ನಲ್ಲಿ ಹನುಮಾನ್ ಚಾಲೀಸಾ ಹಾಕಿದ ಪೂಜಾರಿಗೆ ಬೆದರಿಕೆ

ಪಿಟಿಐ
Published 4 ಅಕ್ಟೋಬರ್ 2025, 6:46 IST
Last Updated 4 ಅಕ್ಟೋಬರ್ 2025, 6:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಣಸಿ (ಉತ್ತರ ಪ್ರದೇಶ): ಇಲ್ಲಿನ ಮದನಪುರ ಪ್ರದೇಶದಲ್ಲಿ ಲೌಡ್ ಸ್ಪೀಕರ್‌ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ದೇಗುಲದ ಪೂಜಾರಿಯೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಶುಕ್ರವಾರ ಹನುಮಾನ್ ದೇಗುಲದಲ್ಲಿ ಪೂಜೆ ಮಾಡಿದ ಬಳಿಕ, ಲೌಡ್ ಸ್ಪೀಕರ್‌ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದೆ. ಈ ವೇಳೆ ಅಬ್ದುಲ್ ನಾಸಿರ್ ಹಾಗೂ ಅವರ ಪುತ್ರ ಬಂದು ನಿಂದಿಸಿದ್ದಾರೆ’ ಎಂದು ಪೂಜಾರಿ ಸಂಜಯ್ ಪ್ರಜಾಪತಿ ತಿಳಿಸಿದ್ದಾರೆ.

ಲೌಡ್ ಸ್ಪೀಕರ್ ಅನ್ನು ಬಂದ್ ಮಾಡುವಂತೆ ಹೇಳಿದರಲ್ಲದೆ, ಮುಂದೆ ಹೀಗೆ ಮಾಡಿದರೆ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಹತ್ತಕ್ಕೂ ಅಧಿಕ ಮಂದಿ ಸುತ್ತುವರಿದು ಬೆದರಿಕೆ ಹಾಕಿದ್ದಾರೆ ಎಂದು ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.