ADVERTISEMENT

ಶಿರಸಿ: ಕಾಂಗ್ರೆಸ್‌ಗೆ ಬಿಡ್ಡಿಂಗ್ ದಂದೆಯಂತಾದ ವರ್ಗಾವಣೆ: ಶಾಸಕ ಪೂಂಜ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 8:27 IST
Last Updated 15 ಸೆಪ್ಟೆಂಬರ್ 2023, 8:27 IST
<div class="paragraphs"><p>ಹರೀಶ್ ಪೂಂಜ</p></div>

ಹರೀಶ್ ಪೂಂಜ

   

ಶಿರಸಿ: ಅಧಿಕಾರಿಗಳ ವರ್ಗಾವಣೆಯನ್ನು ಬಿಡ್ಡಿಂಗ್ ದಂದೆಯಂತೆ ಮಾಡುತ್ತಿರುವ ಏಕೈಕ ಸರ್ಕಾರವೆಂದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಟೀಕಿಸಿದರು.

ನಗರದಲಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಆಗಮಿಸಿದ ಅವರು ಪತ್ರಕರ್ತರ ಜತೆ ಮಾತನಾಡಿ, ಪ್ರತಿಪಕ್ಷದ ನಾಯಕ ಸ್ಥಾನ ಆಯ್ಕೆ ಪಕ್ಷದ ವರಿಷ್ಠರ ತೀರ್ಮಾನವಾಗಿದೆ. ಅದನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ಸಿಗರಿಗೆ ಇಲ್ಲ. ಬಿಜೆಪಿಗರಿಗೆ ಹಣ ಕೊಟ್ಟು ಸ್ಥಾನ ಪಡೆಯುವ ಸ್ಥಿತಿ ಬಂದಿಲ್ಲ. ಆದರೆ ಕಾಂಗ್ರೆಸ್ ತನ್ನ ಹಿಂದಿನ ಇತಿಹಾಸ ಮೆಲಕು ಹಾಕುವ ಅಗತ್ಯವಿದೆ. ಭ್ರಷ್ಚಚಾರ ರಾಜಕಾರಣ ಮಾಡಿ ಸಮಾಜ, ದೇಶವನ್ನು ದಾರಿ ತಪ್ಪಿಸಿದ ಕೆಲಸ ಮಾಡಿದ ಕೀರ್ತಿ ಕಾಂಗ್ರೆಸ್'ಗೆ ಸಲ್ಲುತ್ತದೆ. ಇವತ್ತಿನ ಕಾಲಘಟ್ಟದಲ್ಲಿ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ವರ್ಗಾವಣೆ ವ್ಯವಸ್ಥೆಯೆ ಬಿಡ್ಡಿಂಗ್ ರಾಜಕಾರಣದ ಹಂತಕ್ಕೆ ತರಲಾಗಿದೆ. ಇಂಥ ಹಿನ್ನೆಲೆ ಉಳ್ಳವರ ಮಾತನ್ನು ಬಿಜೆಪಿಗರು ಕೇಳಲು ಸಿದ್ಧರಿಲ್ಲ. ನಮ್ಮ ಪಕ್ಷದ ವಿಚಾರ ಆಂತರಿಕವಾಗಿದೆ ಎಂದರು.

ADVERTISEMENT

ಧರ್ಮಸ್ಥಳದ ಸೌಜನ್ಯ ಸಾವಿನ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಹೋರಾಡಿದ್ದಾರೆ. ಅಲ್ಲದೆ ನಮ್ಮ ನಿಯೋಗ ಮುಖ್ಯಮಂತ್ರಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಪ್ರಕರಣದ ಪುನರ್ ತ‌ನಿಖೆ ವಿಚಾರ ರಾಜ್ಯ ಸರ್ಕಾರ, ಪೋಷಕರು ತೆಗೆದುಕೊಳ್ಳಬೇಕಾದ ನಿರ್ಣಯ. ಈ ಪ್ರಕರಣಕ್ಕೆ ಯಾವುದೇ ರಾಜಕೀಯ ಬಣ್ಣ ಲೇಪನವಾಗಿಲ್ಲ ಎಂದ ಅವರು, ಆಕೆಯ ಅತ್ಯಾಚಾರ ಹಾಗೂ ಕೊಲೆ ಮಾಡಿದವರು, ಬೆಂಬಲ ನೀಡಿದ ರಾಜಕಾರಣಿಗಳಿಗೆ ಹುಚ್ಚು ನಾಯಿಯಂತೆ ಬೀದಿ ಬೀದಿ ತಿರುಗುವ ಸ್ಥಿತಿ ಬರಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.