ADVERTISEMENT

ಕಾರವಾರ: ಅಪರೂಪದ 'ಹಾಕ್ಸ್ ಬಿಲ್' ಆಮೆ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 5:59 IST
Last Updated 31 ಆಗಸ್ಟ್ 2021, 5:59 IST
ತೀಳ್ಮಾತಿ ಬಳಿ ಸಮುದ್ರ ದಂಡೆಯಲ್ಲಿ ಪತ್ತೆಯಾದ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಕಳೇಬರ.
ತೀಳ್ಮಾತಿ ಬಳಿ ಸಮುದ್ರ ದಂಡೆಯಲ್ಲಿ ಪತ್ತೆಯಾದ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಕಳೇಬರ.   

ಕಾರವಾರ: ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಕಳೇಬರವು ತಾಲ್ಲೂಕಿನ ತೀಳ್ಮಾತಿ ಬಳಿ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದೆ. ಈ ಪ್ರಭೇದದ ಆಮೆಗಳು ಹೆಚ್ಚಾಗಿ ಫೆಸಿಪಿಕ್, ಅಟ್ಲಾಂಟಿಕ್ ಸಾಗರ ಹಾಗೂ ಅಂಡಮಾನ್, ನಿಕೋಬಾರ್‌ ಭಾಗದ ಸಮುದ್ರದಲ್ಲಿ ಕಡಿಮೆ ಆಳದಲ್ಲಿ, ಹವಳದ ದಿಬ್ಬಗಳ ನಡುವೆ ಕಾಣಿಸುತ್ತವೆ.

ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿ ಇದನ್ನು
ಇಲ್ಲಿ ಪತ್ತೆ ಮಾಡಿದ್ದಾರೆ. ಈ ಆಮೆಯ ಮುಖವು ಗಿಡುಗನ ಮುಖವನ್ನು ಹೋಲುತ್ತದೆ. ದೇಹದ ಮೇಲೆ ಹುಲಿಯ ಶರೀರದಲ್ಲಿರುವಂತೆ ಪಟ್ಟೆಗಳಿವೆ. ಜಾಲಪಾದದಲ್ಲಿ ಎರಡು ಉಗುರುಗಳಿದ್ದು, ನೋಡಲು ತುಂಬ ಆಕರ್ಷಕವಾಗಿದೆ.

'ಹಾಕ್ಸ್ ಬಿಲ್' ಕಳೇಬರ

'ಈ ಜಾತಿಯ ಆಮೆಗಳು ಸಮುದ್ರದಲ್ಲಿ 4,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ,100 ಕಿಲೋಗ್ರಾಮ್‌ವರೆಗೂ ಬೆಳೆಯಬಲ್ಲವು. ಎರಡು, ಮೂರು ವರ್ಷಗಳಿಗೊಮ್ಮೆ ಮೊಟ್ಟೆಯಿಡುತ್ತವೆ' ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ADVERTISEMENT

'ಕಾರವಾರದಲ್ಲಿ ಇದೇ ಮೊದಲಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿ ಸಿಕ್ಕಿದ ಬಳಿಕ ಆಮೆಯ ಸಾವಿಗೆ ಕಾರಣ ತಿಳಿಯಲಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.