ADVERTISEMENT

ಕಾರವಾರದಲ್ಲಿ ಆರೋಗ್ಯ ಸಿಬ್ಬಂದಿಗೂ ಕೋವಿಡ್

ಜಿಲ್ಲೆಯಲ್ಲಿ ಗುರುವಾರ 23 ಮಂದಿಗೆ ಖಚಿತ: ಕಾರವಾರದಲ್ಲಿ 10 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 13:10 IST
Last Updated 9 ಜುಲೈ 2020, 13:10 IST
   

ಕಾರವಾರ:ಜಿಲ್ಲೆಯಲ್ಲಿ ಗುರುವಾರ 23 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ 10 ಮಂದಿ ಕಾರವಾರದವರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಐವರಿಗೆ, ಹೊನ್ನಾವರ ಮತ್ತು ಯಲ್ಲಾಪುರ ತಾಲ್ಲೂಕಿನಲ್ಲಿ ತಲಾ ಇಬ್ಬರಿಗೆ, ಭಟ್ಕಳ, ಶಿರಸಿ, ಮುಂಡಗೋಡ ಹಾಗೂ ಹಳಿಯಾಳ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

ಕಾರವಾರ ತಾಲ್ಲೂಕಿನಲ್ಲಿ ಇಬ್ಬರು ಆರೋಗ್ಯ ಸೇವೆಗಳ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯಾಗಿರುವ 25 ವರ್ಷದ ಯುವಕ ಹಾಗೂ ಮುದಗಾ ನಿವಾಸಿಯಾಗಿರುವ 24 ವರ್ಷದ ಲ್ಯಾಬ್ ಟೆಕ್ನಿಷಿಯನ್‌ ಸೋಂಕಿತರಾಗಿದ್ದಾರೆ.ಸಿದ್ದಾಪುರ ತಾಲ್ಲೂಕಿನಲ್ಲೂಆರೋಗ್ಯ ಇಲಾಖೆಯ 56 ಮತ್ತು 59 ವರ್ಷದ ಇಬ್ಬರು ಸಿಬ್ಬಂದಿಗೆ ಕೋವಿಡ್ ಖಚಿತವಾಗಿದೆ.

ADVERTISEMENT

26, 27 ಹಾಗೂ 28 ವರ್ಷದ ಮೂವರು ಯುವಕರು ಇರಾಕ್‌ನಿಂದ ಮರಳಿ ಕಾರವಾರದ ಹೋಟೆಲ್‌ನಲ್ಲಿದ್ದರು.43 ವರ್ಷದ ವ್ಯಕ್ತಿಯೊಬ್ಬರು ಅಂಡಮಾನ್ ನಿಕೋಬಾರ್‌ನಿಂದ ಬಂದವರು. ಬೆಂಗಳೂರಿನಿಂದ ಬಂದಿರುವ21 ಮತ್ತು 27 ವರ್ಷದ ಇಬ್ಬರು ಯುವಕರಿಗೂ ಸೋಂಕು ಖಚಿತವಾಗಿದೆ.

ಸಿದ್ದಾಪುರದಲ್ಲಿ 23 ವರ್ಷದ ಇಬ್ಬರು ಹಾಗೂ 24 ವರ್ಷದ ಒಬ್ಬರು ಯುವತಿಯರೂ ಸೋಂಕಿತರಾಗಿದ್ದಾರೆ.ಕಾರವಾರದ 30 ವರ್ಷದ ಯುವಕ ಹಾಗೂ ಯುವತಿಗೆ, ಯಲ್ಲಾಪುರದ 22 ಮತ್ತು 23 ವರ್ಷದ ಇಬ್ಬರು ಯುವತಿಯರಿಗೆ ಸೋಂಕು ಬಂದಿರುವ ಮೂಲವನ್ನುಪತ್ತೆ ಹಚ್ಚಲಾಗುತ್ತಿದೆ.

ಹೊನ್ನಾವರ ತಾಲ್ಲೂಕಿನ ಹಳದೀಪುರದ ಇಬ್ಬರು ಸೋಂಕಿತರಲ್ಲಿ 45 ವರ್ಷದ ಮಹಿಳೆಯು 21531 ಸಂಖ್ಯೆಯ ರೋಗಿಯ ಸಂಪರ್ಕಕ್ಕೆ ಬಂದಿದ್ದಾರೆ. 25 ವರ್ಷದ ಯುವಕ 21532 ಸಂಖ್ಯೆಯ ಸೋಂಕಿತರ ಪ್ರಾಥಮಿಕ ಸಂಪರ್ಕವಾಗಿದ್ದಾರೆ.

ಹಳಿಯಾಳದ 60 ವರ್ಷದ ವ್ಯಕ್ತಿಯು ಗೋವಾದಿಂದ, ಭಟ್ಕಳದ 44 ವರ್ಷದ ವ್ಯಕ್ತಿಯು ವಿಜಯವಾಡದಿಂದ ಮರಳಿ ಬಂದವರು. ಮಂಚಿಕೇರಿಯ 43 ವರ್ಷದ ಮಹಿಳೆಯು 20704 ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ಕಾರವಾರದಲ್ಲಿ ಸ್ವಯಂ ಲಾಕ್‌ಡೌನ್:ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆಯಾಗಿ ಕಾರವಾರದ ವ್ಯಾಪಾರಸ್ಥರು ಜುಲೈ 10ರಿಂದ ಮಧ್ಯಾಹ್ನ 2ರಿಂದಲೇ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ವಿಧಿಸಿಕೊಳ್ಳಲು ವರ್ತಕರು ಮುಂದಾಗಿದ್ದು, 10 ದಿನ ಪ್ರಾಯೋಗಿಕವಾಗಿ ಈ ನಿರ್ಬಂಧ ಜಾರಿ ಮಾಡಿಕೊಳ್ಳಲಿದ್ದಾರೆ. ಔಷಧಿ ಮಳಿಗೆಗಳು, ರೆಸ್ಟೊರೆಂಟ್‌ಗಳು ಮತ್ತು ಆಹಾರ ಪಾರ್ಸೆಲ್ ನೀಡುವ ವಹಿವಾಟುಗಳು ಇದರಿಂದ ಹೊರತಾಗಿವೆ ಎಂದು ಕಾರವಾರ ಛೇಂಬರ್ ಆಫ್ ಕಾಮರ್ಸ್‌ನಿಂದ ಉಪ ವಿಭಾಗಾಧಿಕಾರಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

512:ಒಟ್ಟು ಸೋಂಕಿತರು

210:ಗುಣಮುಖರಾದವರು

300:ಸಕ್ರಿಯ ಪ್ರಕರಣಗಳು

2:ಮೃತಪಟ್ಟವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.