ADVERTISEMENT

ಕಾರವಾರ: ಜೋರು ಮಳೆ, ಬೇಳೂರು ಕಾಡಿನಲ್ಲಿ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 9:49 IST
Last Updated 8 ಜುಲೈ 2022, 9:49 IST
   

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಸಮೀಪದ ಬೇಳೂರು ಕಾಡಿನಲ್ಲಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಆರಣ್ಯ ಪ್ರದೇಶದ ನಡುವೆ ಆಗಿರುವ ಕಾರಣ ಯಾವುದೇ ಜೀವಹಾನಿ, ಜನಜೀವನಕ್ಕೆ ತೊಂದರೆಯಾಗಿಲ್ಲ.

ಅರಣ್ಯ ಸರ್ವೆ ನಂಬರ್ 68ರಲ್ಲಿ ಸುಮಾರು 500 ಮೀಟರ್ ಉದ್ದಕ್ಕೆ, ಅಂದಾಜು ಮೂರು ಎಕರೆ ಪ್ರದೇಶದಲ್ಲಿ ಭೂ ಕುಸಿತವಾಗಿದೆ. ನೂರಾರು ಮರಗಳು ಮಣ್ಣಿನಲ್ಲಿ ಹುದುಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾರವಾರ ತಾಲ್ಲೂಕಿನಲ್ಲಿ ಗುರುವಾರ ರಾತ್ರಿಯಿಂದಲೇ ಜೋರಾಗಿ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 20.5 ಸೆಂಟಿಮೀಟರ್‌ಗಳಷ್ಟು ವರ್ಷಧಾರೆಯಾಗಿದೆ. ತಾಲ್ಲೂಕಿನ ಅರಗಾ, ಚೆಂಡಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಶುಕ್ರವಾರ ಬೆಳಿಗ್ಗೆ ಎರಡು- ಮೂರು ಅಡಿಗಳಷ್ಟು ನೀರು ನಿಂತಿತ್ತು. ಬೆಳಿಗ್ಗೆ ಬಸ್, ಲಾರಿಗಳಂಥ ವಾಹನಗಳ ಸಂಚಾರಕ್ಕೂ ಸಾಧ್ಯವಾಗಿರಲಿಲ್ಲ. ನೀರು ನಿಧಾನವಾಗಿ ಹರಿದು ಹೋದ ಬಳಿಕ ವಾಹನಗಳ ಸಂಚಾರ ಪುನಃ ಆರಂಭವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.