ADVERTISEMENT

ಕರಾವಳಿ ಕಾವಲು ಪಡೆಗೆ 30 ಹೊಸ ದೋಣಿ ಖರೀದಿಗೆ ಪ್ರಸ್ತಾವ: ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 13:11 IST
Last Updated 26 ಅಕ್ಟೋಬರ್ 2021, 13:11 IST
ಗೋಕರ್ಣದ ಪಿತೃಶಾಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಪಿಂಡ ಪ್ರದಾನ, ತಿಲಹವನ ನೆರವೇರಿಸಿ ಪಿತೃಕಾರ್ಯದಲ್ಲಿ ಪಾಲ್ಗೊಂಡರು  
ಗೋಕರ್ಣದ ಪಿತೃಶಾಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಪಿಂಡ ಪ್ರದಾನ, ತಿಲಹವನ ನೆರವೇರಿಸಿ ಪಿತೃಕಾರ್ಯದಲ್ಲಿ ಪಾಲ್ಗೊಂಡರು     

ಗೋಕರ್ಣ: ‘ಕರಾವಳಿ ಕಾವಲುಪಡೆಗೆ 30 ಹೊಸ ದೋಣಿಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಈ ಕಾವಲುಪಡೆಯನ್ನು ವಿಕೇಂದ್ರೀಕರಣ ಮಾಡುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗೋಕರ್ಣದಲ್ಲಿ ಮಂಗಳವಾರ ತ್ರಿಪಿಂಡಿ ಶ್ರಾದ್ಧ, ತಿಲಹವನ ನಡೆಸಿ, ಪಿತೃಕಾರ್ಯ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹುದ್ದೆ ಭರ್ತಿ:‘ಪೊಲೀಸ್ ಇಲಾಖೆಗೆ ನಮ್ಮ ಸರ್ಕಾರ ಸಾಕಷ್ಟು ಪ್ರೋತ್ಸಾಹ ಕೊಟ್ಟಿದೆ. ನಾಲ್ಕು ವರ್ಷಗಳ ಹಿಂದೆ 33 ಸಾವಿರ ಹುದ್ದೆಗಳು ಖಾಲಿಯಿದ್ದವು. ಈಗ 12 ಸಾವಿರವಷ್ಟೇ ಇದೆ. ಸಬ್ ಇನ್‌ಸ್ಪೆಕ್ಟರ್ ಹುದ್ದೆ ಯಾವುದೂ ಖಾಲಿ ಇಲ್ಲದಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ಮತಬ್ಯಾಂಕ್‌ಗಾಗಿ ಜೊಲ್ಲು:‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಮಾತ್ರ ಈ ಹಿಂದಿನ ಮತ್ತು ಈಗಿನ ಆರೆಸ್ಸೆಸ್‌ನಲ್ಲಿ ಅಂತರ ಕಾಣಿಸುತ್ತದೆ. ಯಾವ ಅಂತರವೂ ಇಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ಜೊಲ್ಲು ಸುರಿಸೋದು ಬಿಟ್ಟರೆ ಮತ್ತೇನೂ ಇಲ್ಲ. ಆರೆಸ್ಸೆಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡ್ತೀವೋ ಅಲ್ಪಸಂಖ್ಯಾತರ ಮತ ಅಷ್ಟು ಹೆಚ್ಚು ಮತಗಳು ಸಿಗುತ್ತವೆ ಎಂದು ಭಾವಿಸಿದ್ದಾರೆ. ಇದೆಲ್ಲ ಅವರ ಭ್ರಮೆ ಅಷ್ಟೇ. ಆರೆಸ್ಸೆಸ್ ಅನ್ನು ದೂರಿದಷ್ಟೂ ಅವರೇ ಕಳೆದುಹೋಗ್ತಿದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.