ADVERTISEMENT

ಹಳಿಯಾಳ | ಬಡವರಿಗೆ ಸಹಕಾರಿಯಾದ ಇಂದಿರಾ ಕ್ಯಾಂಟೀನ್

ಹಳಿಯಾಳದಲ್ಲಿ ನಿತ್ಯವೂ 480 ಜನರಿಂದ ಬಳಕೆ

ಸಂತೋಷ ಹಬ್ಬು
Published 5 ಏಪ್ರಿಲ್ 2020, 6:42 IST
Last Updated 5 ಏಪ್ರಿಲ್ 2020, 6:42 IST
ಹಳಿಯಾಳದ ಪುರಸಭೆ ಕಚೇರಿಯ ಹತ್ತಿರ ಮಾರುತಿ ಗಲ್ಲಿಯಲ್ಲಿರುವ ಇಂದಿರಾ ಕ್ಯಾಂಟೀನ್
ಹಳಿಯಾಳದ ಪುರಸಭೆ ಕಚೇರಿಯ ಹತ್ತಿರ ಮಾರುತಿ ಗಲ್ಲಿಯಲ್ಲಿರುವ ಇಂದಿರಾ ಕ್ಯಾಂಟೀನ್   

ಹಳಿಯಾಳ: ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ಕಡುಬಡವರು, ನಿರ್ಗತಿಕರ ಹಸಿವನ್ನು ಪಟ್ಟಣದ ಇಂದಿರಾ ಕ್ಯಾಂಟೀನ್ ನೀಗಿಸುತ್ತಿದೆ. ದಿನದ ದುಡಿಮೆಯನ್ನೇ ನಂಬಿರುವಬಹಳಷ್ಟು ಕಾರ್ಮಿಕರು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಕ್ಯಾಂಟೀನ್ ಅವಲಂಬಿಸಿದ್ದಾರೆ.

ಆರಂಭದಲ್ಲಿ ದಿನವೊಂದಕ್ಕೆ ಸುಮಾರು 900 ಗ್ರಾಹಕರು ಬರುತ್ತಿದ್ದರು.ಬರಬರುತ್ತ 600ಕ್ಕೆ ಇಳಿಯಿತು. ಈಗ ಲಾಕ್‌ಡೌನ್‌ ಪರಿಣಾಮ ದಿನಂಪ್ರತಿ ಸ್ಥಳಿಯರೇ ಸುಮಾರು 480 ಜನರು ಕ್ಯಾಂಟೀನ್‌ಗೆ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಜನತಾ ಕರ್ಫ್ಯೂ ಜಾರಿಯಾಗಿದ್ದಾಗಬೆಳಗಿನ ಉಪಾಹಾರವನ್ನು ಸುಮಾರು 45 ಜನರಿಗೆ ಪುರಸಭೆಯ ಆದೇಶದಂತೆ ಪಾರ್ಸೆಲ್ನೀಡಲಾಗಿತ್ತು ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ನವೀನ ಎನ್.ಆರ್ತಿಳಿಸಿದರು.

‘ಈಗ ನಿರಂತರವಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂರಾತ್ರಿನಿಗದಿತ ಸಮಯದೊಳಗೆ ಊಟ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಆಹಾರ ಸೇವಿಸಬೇಕು.ಜನರ ಬೇಡಿಕೆಯಂತೆ ‍ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಇಡ್ಲಿ ಚಟ್ನಿ, ಭಾನುವಾರ ಶಿರಾ ಉಪ್ಪಿಟ್ಟು, ಊಟಕ್ಕೆಅನ್ನ, ಸಾಂಬಾರು, ಪುಲಾವ್, ಚಿತ್ರಾನ್ನ, ಪುಳಿಯೋಗರೆ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಇಂದಿರಾ ಕ್ಯಾಂಟೀನ್‌ನಿಂದಲೇ ಬೆಳಗಿನ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಗೆ 90ರಷ್ಟು ಊಟ, ಉಪಾಹಾರ ರವಾನಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇಟ್ಟರೆ ಅಗತ್ಯಕ್ಕೆ ಅನುಗುಣವಾಗಿ ಅವರಿಗೂ ಊಟ, ಉಪಹಾರ ಒದಗಿಸಲಾಗುವುದು’ ಎಂದುಪುರಸಭೆ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.

‘ಸ್ವಚ್ಛತೆಗೆ ಆದ್ಯತೆ’:‘ಇಂದಿರಾ ಕ್ಯಾಂಟೀನ್ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಪ್ರತಿನಿತ್ಯ ಪರಿಶೀಲಿಸಲಾಗುತ್ತಿದೆ. ವಿಶೇಷವಾಗಿ ಆಹಾರ ನೀಡುವ ತಟ್ಟೆಗಳು,ಕ್ಯಾಂಟೀನ್‌ಸ್ವಚ್ಛತೆಯನ್ನು ಗಮನಿಸಲಾಗುತ್ತದೆ. ಅಡುಗೆ ಮಾಡುವವರು ಹಾಗೂ ಸಹಾಯಕರು ಅನುಸರಿಸಬೇಕಾದ ಮುನ್ನಚ್ಚರಿಕಾ ಕ್ರಮಗಳನ್ನೂ ಗಮನಿಸಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪ್ರತಿನಿತ್ಯ ತಪಾಸಣೆ ಮಾಡಲಾಗುತ್ತಿದೆ’ ಎಂದು ಪುರಸಭೆ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.