ದಾಂಡೇಲಿ: ಹಸನಮಾಳ ಕೆ.ಎಲ್.ಇ ವಿಮಲಾಬಾಯಿ ವಿಶ್ವನಾಥರಾವ ದೇಶಪಾಂಡೆ ನರ್ಸಿಂಗ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ವಿನಾಯಕ ಪಾಟೀಲ ಉದ್ಘಾಟಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದ್ದು, ವೈದ್ಯರ ಜೊತೆಗೆ ಕೈ ದೀವಿಗೆಯಾಗಿ ತುರ್ತು ಸಮಯದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾರೆ. 80ರಷ್ಟು ಸೇವೆಗಳನ್ನು ದಾದಿಯರು ನೀಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ 2025ರ ಥೀಮ್‌ನಂತೆ ‘ನಮ್ಮ ದಾದಿಯರು, ನಮ್ಮ ಭವಿಷ್ಯ: ದಾದಿಯರನ್ನು ನೋಡಿಕೊಳ್ಳುವುದು ಆರ್ಥಿಕತೆಯನ್ನು ಬಲಪಡಿಸುತ್ತದೆ’ ಎಂಬುದಾಗಿದೆ’ ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಾದಿಯರಾದ ಬೇಬಿ ನಂದಾ, ಮರಿಯಮ್ಮ ಬೈಲಾ, ತುಳಸಾ ಉಪ್ಪಾರ ಹಾಗೂ ಇ.ಎಸ್.ಐ ಆಸ್ಪತ್ರೆಯ ದಾದಿ ಸಂಗೀತ ಎಸ್, ಹಾಗೂ ತಾಯಿ ಮಕ್ಕಳು ಆಸ್ಪತ್ರೆಯ ದಾದಿ ಆಶಾ ಅಗಸಿನಮನೆ ಅವರನ್ನು ಗೌರವಿಸಲಾಯಿತು.
ಕಾಲೇಜಿನ ಸಿಬ್ಬಂದಿ ಜ್ಯೋತಿ ಗಾವಡೆ, ಶೈಲಾ ಗುತ್ತಲ,ವಂದನಾ ಪಾಗೋಜಿ, ಅಪ್ಪಣ ಸುಂಕದ ಹಾಗೂ ನರ್ಸಿಂಗ್ ಕಾಲೇಜಿ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.