ADVERTISEMENT

ಕಾರವಾರ: ಕೈಗಾ ಅಣು ಸ್ಥಾವರದ 5 ಮತ್ತು 6ನೇ ಘಟಕದ ಕಾಂಕ್ರೀಟೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:34 IST
Last Updated 1 ಮಾರ್ಚ್ 2026, 6:34 IST
   

ಕಾರವಾರ: ತಾಲ್ಲೂಕಿನ ಕೈಗಾದ ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣದ ಮೊದಲ ಸುತ್ತಿನ ಕಾಂಕ್ರೀಟೀಕರಣಕ್ಕೆ ಭಾನುವಾರ ಚಾಲನೆ ದೊರೆಯಿತು.

ರಾಷ್ಟ್ರೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡಿದರು.

ಅಣು ಸ್ಥಾವರದ ದಕ್ಷಿಣ ಭಾಗದಲ್ಲಿ ಕಾಂಕ್ರೀಟಿಕರಣಕ್ಕೆ ಚಾಲನೆ ಸಿಕ್ಕಿತು.

ADVERTISEMENT

₹21 ಸಾವಿರ ಕೋಟಿ ವೆಚ್ಚದಲ್ಲಿನ 5 ಮತ್ತು 6 ನೇ ಅಣು ವಿದ್ಯುತ್ ಘಟಕ ನಿರ್ಮಾಣವಾಗುತ್ತಿದೆ‌.

ಪ್ರಸ್ತುತ 220 ಮೆಗಾವ್ಯಾಟ್ ಸಾಮರ್ಥ್ಯದ 4 ಅಣು ಘಟಕಗಳು ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ಈ ನಾಲ್ಕು ಘಟಕದಿಂದ 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ವಿದ್ಯುತ್ ಉತ್ಪಾದನೆ ಬೇಡಿಕೆ ಹೆಚ್ಚಿದ ಹಿನ್ನಲೆಯಲ್ಲಿ ತಲಾ 700 ಮೆಗಾವ್ಯಾಟ್‌ನ ಗುರಿಯೊಂದಿಗೆ 2025 ರಲ್ಲಿ 5 ಮತ್ತು 6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಘಟಕಗಳ ನಿರ್ಮಾಣ ಕಾಮಗಾರಿ 2030ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಣು ವಿದ್ಯುತ್ ನಿಗಮದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭುವನಚಂದ್ರ ಪಾಠಕ, ಕೈಗಾ ಸ್ಥಾನಿಕ ನಿರ್ದೇಶಕ ಬಿ.ವಿನೋದಕುಮಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.