ADVERTISEMENT

ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 18:54 IST
Last Updated 6 ಡಿಸೆಂಬರ್ 2025, 18:54 IST
<div class="paragraphs"><p>ಸಂಸದ ಜಗದೀಶ ಶೆಟ್ಟರ್</p></div>

ಸಂಸದ ಜಗದೀಶ ಶೆಟ್ಟರ್

   

ಶಿರಸಿ: ‘ಅಧಿವೇಶನ ಬಂದ ಕಾರಣ ಸಿಎಂ ಖುರ್ಚಿ ಕದನ ತಾತ್ಕಾಲಿಕ ವಿರಾಮ ಸ್ಥಿತಿಗೆ ತಲುಪಿದ್ದು, ಅಧಿವೇಶನದ ನಂತರ ಇದು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ’ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಶನಿವಾರ ಶಿರಸಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಿದೆ. ಅಧಿವೇಶನ ಬಂದಿದ್ದರಿಂದ ಹೊಂದಾಣಿಕೆ ತೋರಿಸುತ್ತಿದ್ದಾರೆ. ಆದರೆ ಅವರ ಹಿಂಬಾಲಕರ ನಡುವೆ ಕುಸ್ತಿ ನಡೆದಿದೆ’ ಎಂದರು. 

ADVERTISEMENT

‘ಕಾಂಗ್ರೆಸ್‌ನ ಹೈಕಮಾಂಡ್‌ನಿಂದ ಸಿಎಂ, ಡಿಸಿಎಂ ನಡುವಿನ ಕದನದ ಸಂಬಂಧ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಯಾವುದಾದರೂ ನಿರ್ಣಯ ತೆಗೆದುಕೊಂಡು ಸರ್ಕಾರ ಪತನವಾದರೆ ಆ ಪಕ್ಷದ ಎಟಿಂಎ ಮಶಿನ್ ಬಂದ್ ಆಗುತ್ತದೆ ಎಂಬ ಭಯದಲ್ಲಿ ಅವರಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮೆಕ್ಕೆಜೋಳ ಖರೀದಿಸಿಬೇಕು ಎಂದು ರೈತರಿಂದ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಮೆಕ್ಕೆಜೋಳ ಖರೀದಿ ಮಾಡಿ ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಇಲ್ಲದ ಸಬೂಬು ಹೇಳುತ್ತಿದೆ. ಯಾಕೆಂದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಇದೊಂದು ತುಘಲಕ್ ಆಡಳಿತ. ಇಂಥವರಿಂದ ರಾಜ್ಯದ ಹಿತಾಸಕ್ತಿಗೆ ತೊಂದರೆಯಾಗಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.