
ಪ್ರಜಾವಾಣಿ ವಾರ್ತೆ
ಸೈಬರ್ ವಂಚನೆ
ಕಾರವಾರ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಲಾಭ ಗಳಿಕೆಯ ಆಮಿಷ ತೋರಿಸಿ ತಾಲ್ಲೂಕಿನ ಸದಾಶಿವಗಡದ ಪಂಕಜ್ ನಾಯ್ಕ ಎಂಬುವವರಿಗೆ ₹59.50 ಲಕ್ಷ ವಂಚಿಸಿರುವ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಇನ್‌ಸ್ಟಾಗ್ರಾಮ್‌ನಲ್ಲಿ ನುವುಮಾ ಇನ್‌ವೆಸ್ಟ್‌ಮೆಂಟ್ ಗ್ರುಪ್ ಟ್ರೇಡಿಂಗ್ ಕಂಪನಿ ಹೆಸರಿನ ಜಾಹೀರಾತು ಗಮನಿಸಿ ಅಲ್ಲಿ ನಮೂದಿಸಿದ್ದ ಸಂಖ್ಯೆಗೆ ಕರೆ ಮಾಡಿ ಪಂಕಜ್ ವಂಚನೆಗೆ ಒಳಗಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್ ಟ್ರೇಡಿಂಗ್ ಮಾಡುವ ಮಾಹಿತಿ ನೀಡುತ್ತಿದ್ದ ವಂಚಕರು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಿಕೊಂಡಿದ್ದರು. ಲಾಭಾಂಶದ ಹಣ ಹಿಂಪಡೆಯಲು ಮುಂದಾದಾಗ ಪಾವತಿಸಿದ ಹಣವನ್ನೂ ಮರಳಿಸದೆ ಸಂಪರ್ಕವನ್ನೇ ಕಡಿತಗೊಳಿಸಿದರು ಎಂದು ಪಂಕಜ್ ದೂರು ನೀಡಿದ್ದರು’ ಎಂದು ತಿಳಿಸಿದ್ದಾರೆ.