ಕೈಗಾರಿಕೆ (ಪ್ರಾತಿನಿಧಿಕ)
ಐಸ್ಟಾಕ್ ಚಿತ್ರ
ಕಾರವಾರ: ಕೈಗಾರಿಕೆ ವಸಾಹತುಗಳಲ್ಲಿನ ಸಮಸ್ಯೆ ಸೇರಿದಂತೆ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ತೊಂದರೆಗಳ ಕುರಿತು ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ಜುಲೈ 25ರ ಒಳಗೆ ದೂರು ಸಲ್ಲಿಸಿ ಎಂದು ಜಂಟಿ ಕೈಗಾರಿಕೆ ನಿರ್ದೇಶಕ ನಾಗರಾಜ ನಾಯಕ ತಿಳಿಸಿದ್ದಾರೆ.
ಕೈಗಾರಿಕೋದ್ಯಮಿಗಳು ದೂರುಗಳನ್ನು ಕಚೇರಿಯ ಇಮೇಲ್ ವಿಳಾಸಕ್ಕೆ dic.ukd123@gmail.com ಅಥವಾ ಕಚೇರಿಗೆ ಖುದ್ದು ಭೇಟಿ ನೀಡಿ ಸಲ್ಲಿಸಬಹುದು. ಬಂದ ದೂರುಗಳನ್ನು ಆಗಸ್ಟ್ ತಿಂಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ ಚರ್ಚಿಸಿ, ಪರಿಹರಿಸಲು ಕ್ರಮವಹಿಸಲಾಗುತ್ತದೆ. ಅಗತ್ಯ ಮಾಹಿತಿಗೆ ಕಚೇರಿ (08382 282302) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.