ADVERTISEMENT

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿದ್ದೇಕೆ?: ಕೋಟ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 6:06 IST
Last Updated 26 ಜನವರಿ 2023, 6:06 IST
   

ಕಾರವಾರ: ಚುನಾವಣೆ ಸಮೀಪಿಸಿದಾಗ ತಾವೂ ಹಿಂದೂಗಳು ಎನ್ನುತ್ತಿರುವ ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯ್ದೆ ವಿರೋಧಿಸಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ತಾವೂ ಹಿಂದೂಗಳು ಎಂದು ಈಗ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಕಾಯ್ದೆ ಜಾರಿಗೆ ತಂದಾಗ ವಿರೋಧಿಸಿದ್ದವರು ಇದೇ ನಾಯಕರು' ಎಂದು ಕುಟುಕಿದರು.

'ಕಾಂಗ್ರೆಸ್ಸಿನ ಉಚಿತ ಭಾಗ್ಯವನ್ನು ಜನರು ನಂಬುವುದಿಲ್ಲ. ವಿರೋಧ ಪಕ್ಷಗಳು ಟೀಕಿಸುವುದು ಸಹಜ. ಆದರೆ ಸಿದ್ದರಾಮಯ್ಯ ಟೀಕೆ ಮಿತಿಮೀರುತ್ತಿದೆ' ಎಂದರು.

ADVERTISEMENT

'ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆಗೆ 18 ಲಕ್ಷ ಕ್ವಿಂಟಲ್ ಭತ್ತ ಅಗತ್ಯವಿದೆ.‌ ಆದರೆ ಈವರೆಗೆ ಅಗತ್ಯ ಪ್ರಮಾಣದಷ್ಟು ಭತ್ತ ಲಭ್ಯವಾಗಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.