ADVERTISEMENT

‘ಕಾಲ್‌ ಗರ್ಲ್’ ಮೋಹದ ಬಲೆಗೆ ಸಿಲುಕಿ ₹86 ಸಾವಿರ ಕಳೆದುಕೊಂಡ ಶಿಕಾರಿಪುರ ಕಂಡಕ್ಟರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 5:45 IST
Last Updated 2 ಅಕ್ಟೋಬರ್ 2019, 5:45 IST
   

ಕಾರವಾರ: ‘ಕಾಲ್ ಗರ್ಲ್’ ಮೋಹಕ್ಕೆ ಬಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ₹86 ಸಾವಿರ ಕಳೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ 28 ವರ್ಷದ ನಿರ್ವಾಹಕರು, ಶಿರಸಿ ಡಿಪೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಮೊಬೈಲ್‌ನ ಗೂಗಲ್ಸರ್ಚ್‌ಗೆ ಹೋಗಿ ‘ಕಾಲ್ ಗರ್ಲ್’ ಎಂದು ಹುಡುಕಾಟ ನಡೆಸಿದ್ದರು. ಅಲ್ಲಿ ಕಾಣಿಸಿದ್ದ ‘ಇಂಡಿಪೆಂಡೆಂಟ್ ಕಾಲ್ ಗರ್ಲ್ಸ್’ ಎಂಬ ವೆಬ್‌ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಅವರು ಕರೆ ಮಾಡಿದ್ದರು.

ಕರೆ ಸ್ವೀಕರಿಸಿದ್ದ ಮಹಿಳೆಗೆ ತಾವು ಶಿರಸಿಯ ಮಾರಿಕಾಂಬಾ ದೇವಸ್ಥಾನದ ಬಳಿ ಇರುವುದಾಗಿ ತಿಳಿಸಿದ್ದರು. ಆಕೆತನ್ನ ‘ಫೋನ್ ಪೇ’ಖಾತೆಗೆ ₹3 ಸಾವಿರ ಜಮಾ ಮಾಡಿದರೆಜತೆಗೆ ಕರೆದುಕೊಂಡು ಹೋಗುವುದಾಗಿ ಷರತ್ತು ಹಾಕಿದ್ದಳು. ಅದರಂತೆ ಅವರು ಆ್ಯಪ್ ಮೂಲಕ ಹಣ ಪಾವತಿಸಿದ್ದರು. ಆಕೆ ಪುನಃ ಹಣ ನೀಡುವಂತೆ ಕೇಳಿದಾಗಲೂ ಆ ನಿರ್ವಾಹಕರಿಗೆ ಮೋಸ ಹೋಗಿದ್ದು ಅರಿವಿಗೆ ಬರಲಿಲ್ಲ. ಬದಲಿಗೆ, ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹26 ಸಾವಿರ ವರ್ಗಾಯಿಸಿದ್ದರು.

ADVERTISEMENT

ಈ ನಡುವೆ,ತಮ್ಮ ಮೊಬೈಲ್‌ಗೆ ಬಂದಿದ್ದ ಒ.ಟಿ.ಪಿ ಸಂಖ್ಯೆ ಮತ್ತುಎ.ಟಿ.ಎಂ ಕಾರ್ಡ್ ಸಂಖ್ಯೆಯನ್ನೂ ಅವರು ಆಕೆಗೆ ತಿಳಿಸಿದ್ದರು.ಇದರ ಮೂಲಕ ಮತ್ತೆ ₹50 ಸಾವಿರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಳು. ಈ ರೀತಿ ಒಟ್ಟು ₹86 ಸಾವಿರವನ್ನು ಅವರು ಕಳೆದುಕೊಂಡರು.

ತಮಗಾದ ಮೋಸದ ಬಗ್ಗೆ ಅವರು ಕಾರವಾರದ ಸಿ.ಇ.ಎನ್ ಅಪರಾಧ ಠಾಣೆಗೆ ದೂರು ನೀಡಿದ್ದು, ಪೊಲೀಸರು ವಂಚಕಿಯನ್ನು ಹುಡುಕಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.