ಕುಮಟಾ: ‘ಪಟ್ಟಣದ ಶಾಂತಿಕಾ ಪರಮೇಶ್ವರಿ ದೇವಾಲಯದ ಸಮುದಾಯ ಭವನ ಲೋಕಾರ್ಪಣೆ ಮೇ 18 ರಂದು ಸಂಜೆ 5.30 ಗಂಟೆಗೆ ನಡೆಯಲಿದೆ ಎಂದು ದೇವಾಲಯ ಆಡಳಿತ ಧರ್ಮದರ್ಶಿ ಕೃಷ್ಣ ಪೈ ಹೇಳಿದರು.
ದೇವಾಲಯ ಅವರಣದಲ್ಲಿ ಸೋಮವಾರ ನಡೆದ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸ್ಥಳೀಯ ಶಾಸಕ ದಿನಕರ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮತಿ ಭಟ್ಟ, ಸದಸ್ಯ ಎಂ.ಟಿ.ನಾಯ್ಕ, ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ, ಪುರೋಹಿತರಾದ ವಿದ್ವಾನ್ ನಾರಾಯಣ ಉಪಾಧ್ಯ, ಗೋಕರ್ಣ ಮಹಾಬಲೇಶ್ವರ ದೇವಲಯದ ಅನುವಂಶೀಯ ಉಪಾದಿ ಮಂಡಳ ಅಧ್ಯಕ್ಷರು ಹಾಗೂ ಪ್ರಧಾನ ಅರ್ಚಕ ರಾಜಗೋಪಾಲ ಅಡಿ ಗುರೂಜಿ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಎಲ್. ನಾಯ್ಕ ಮುಂತಾದವರು ಪಾಲ್ಗೊಳ್ಳುವರು ಎಂದರು.
ದಿವಂಗತ ಬಿ.ಎಂ. ಪೈ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಪೈ, ಕಾರ್ಯಕ್ರಮದ ಅಂಗವಾಗಿ ಮೇ 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, 17ರಂದು ಸಂಜೆ 7 ಗಂಟೆಗೆ ‘ಗಿರಿಜಾ ಕಲ್ಯಾಣ’ ಎಂಬ ಪೌರಾಣಿಕ ನೃತ್ಯ ರೂಪಕ ಮತ್ತು 18ರಂದು ಗುರು ವಂದನೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಎಂ.ಟಿ.ನಾಯ್ಕ, ಪ್ರಮುಖರಾದ ಪ್ರಶಾಂತ ನಾಯ್ಕ, ಮಂಜುನಾಥ ನಾಯ್ಕ, ಎನ್. ಆರ್ ಗಜು, ರಾಜು ಗುನಗಾ, ಪ್ರಕಾಶ ಗುನಗಾ, ಅರುಣ ಮಣಕಿಕರ, ಜಯದೇವ ಬಳಗಂಡಿ, ಪ್ರಶಾಂತ ಗುನಗಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.