ADVERTISEMENT

ಕುಮಟಾ | ಶೈಕ್ಷಣಿಕ ದಾಸೋಹಕ್ಕೆ ಶ್ರಮಿಸೋಣ: ದಿನಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:40 IST
Last Updated 22 ಡಿಸೆಂಬರ್ 2025, 5:40 IST
ಕುಮಟಾ ತಾಲ್ಲೂಕಿನ ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶಾಸಕ ದಿನಕರ ಶೆಟ್ಟಿ ಮತನಾಡಿದರು 
ಕುಮಟಾ ತಾಲ್ಲೂಕಿನ ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶಾಸಕ ದಿನಕರ ಶೆಟ್ಟಿ ಮತನಾಡಿದರು    

ಕುಮಟಾ: `ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸೌಲಭ್ಯ ಸುತ್ತಲಿನ ಬಡ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವುದು ಕಾಲೇಜಿನ ಅಬಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಪ್ರಮುಖ ಹೊಣೆಗಾರಿಕೆಯಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲ್ಲೂಕಿನ ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶನಿವಾರ ಮಾತನಾಡಿದ, ಅವರು,  `ಸಮುದಾಯದ ಸಹಕಾರ, ಶಿಕ್ಷಕರ ತ್ಯಾಗ ಹಾಗೂ ಅಭಿವೃದ್ಧಿ ಸಮಿತಿಯ ನೆರವಿಲ್ಲದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪ್ರಯೋಜನ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸುವುದು  ಸಾಧ್ಯ. ಈ ದಿಸೆಯಲ್ಲಿ ಎಲ್ಲರೂ ಸೇರಿ ಶೈಕ್ಷಣಿಕ ದಾಸೋಹದ ಯಶಸ್ಸಿಗೆ ಶ್ರಮಿಸಬೇಕು’ ಎಂದರು.

ಅತಿಥಿಯಾಗಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ನಾಯ್ಕ ಮಾತನಾಡಿ, `ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಗ್ರಾಮೀಣ ಭಾಗದ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರು, ಪ್ರಾಚಾರ್ಯರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿದ ಉದಾಹರಣೆಗಳಿವೆ. ಅದುವೇ ನಿಜವಾದ ಶಿಕ್ಷಣ ಪ್ರೀತಿ’ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇ.ಒ. ಆರ್.ಎಲ್. ಭಟ್ಟ, `ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸುವ ಅವಕಾಶಗಳನ್ನು ವಿದ್ಯಾರ್ಥಿಗಳು ಕಳೆದುಕೊಳ್ಳದೆ ಶಿಕ್ಷಕರ ನೆರವು ಪಡೆಯಬೇಕು’ ಎಂದರು.

ಅಭಿವೃದ್ಧಿ ಸಮಿತಿ ಸದಸ್ಯರಾದ ರಾಮು ಕೆಂಚನ್, ಉದ್ದಂಡ ನಾಯಕ, ಜಗದೀಶ ನಾಯಕ ಮತ್ತು ಮಾಣೇಶ್ವರ ನಾಯಕ, ಪ್ರಾಚಾರ್ಯ ರಾಜೀವ ನಾಯ್ಕ, ಉಪನ್ಯಾಸಕರಾದ ನಾಗರಾಜ ಗಾಂವ್ಕರ, ವಿಜಯಲಕ್ಷ್ಮಿ  ನಾಯಕ ಪಾಲ್ಗೊಂಡಿದ್ದರು.