ADVERTISEMENT

ಧರ್ಮದಿಂದ ಗುರುತಿಸಿಕೊಂಡ ಭಾರತ: ಶಿವಯೋಗಿ ಅಭಿನವ ಹಾಲವೀರಪಜ್ಜ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:32 IST
Last Updated 12 ಜನವರಿ 2026, 7:32 IST
ಕುಮಟಾದಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಡೆಯಿತು
ಕುಮಟಾದಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಡೆಯಿತು   

ಕುಮಟಾ: ‘ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ವೈಶಿಷ್ಟತೆಯಿಂದ ಗುರುತಿಸಿಕೊಂಡರೆ, ಭಾರತ ಧರ್ಮದ ಮೂಲಕ ತನ್ನನ್ನು ಗುರುತಿಸಿಕೊಂಡಿದೆ’ ಎಂದು ಹಿರೇಹಡಗಲಿಯ ಸದ್ಗುರು ಶಿವಯೋಗಿ ಅಭಿನವ ಹಾಲವೀರಪಜ್ಜ ಸ್ವಾಮೀಜಿ ಹೇಳಿದರು.

ಪಟ್ಟಣದ ವಿವೇಕನಗರ, ಮಣಕಿ, ಗಾಂಧೀನಗರ, ಸಿದ್ದನಬಾವಿ ಹಿಂದೂ ಸಮಾಜದವರು ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಭಾರತದ ವೈವಿಧ್ಯಮಯ ಇತಿಹಾಸ ನೆನಪು ಮಾಡಿಕೊಂಡಾಗ ಹಿಂದೂ ಎನ್ನುವ ಪದವೇ ಎಲ್ಲೆಲ್ಲೂ ಪ್ರಧಾನವಾಗಿ ಕಾಣುತ್ತದೆ. ಆದರೆ ಅದನ್ನೇ ನಾವು ಇಂದು ಮರೆತಿದ್ದೇವೆ’ ಎಂದರು.

ADVERTISEMENT

ನಿವೃತ್ತ ಸರ್ವೇ ಅಧಿಕಾರಿ ಎಂ.ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಡಾ.ಜಿ.ಜಿ.ಹೆಗಡೆ, ಡಾ.ಸುರೇಶ ಹೆಗಡೆ, ಎಸ್.ವಿ.ಹೆಗಡೆ, ಆರ್.ಜಿ.ಭಟ್, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ತಿಮ್ಮಪ್ಪ ಮುಕ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.