ADVERTISEMENT

ಕಾರವಾರ: ಅಶೋಕೆಯಲ್ಲಿ ಸಾಮೂಹಿಕ ಜನಿವಾರ ಧಾರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:23 IST
Last Updated 10 ಆಗಸ್ಟ್ 2025, 5:23 IST
ಗೋಕರ್ಣದ ಅಶೋಕೆಯಲ್ಲಿ ಸಾಮೂಹಿಕವಾಗಿ ಜನಿವಾರ ಧಾರಣೆ ಕಾರ್ಯಕ್ರಮ ನಡೆಯಿತು.
ಗೋಕರ್ಣದ ಅಶೋಕೆಯಲ್ಲಿ ಸಾಮೂಹಿಕವಾಗಿ ಜನಿವಾರ ಧಾರಣೆ ಕಾರ್ಯಕ್ರಮ ನಡೆಯಿತು.   

ಕಾರವಾರ: ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯದ 31ನೇ ದಿನವಾದ ಶನಿವಾರ ಯಜುರ್ ಉಪಾಕರ್ಮ ನಡೆಯಿತು.

ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತು ಪಾರಂಪರಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ನೇತೃತ್ವದಲ್ಲಿ ಉಪಾಕರ್ಮಾಂಗ ವಿಧಿವಿಧಾನಗಳು ನೆರವೇರಿದವು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಭಕ್ತರು ಜನಿವಾರ ಧಾರಣೆ ಮಾಡಿದರು.

‘ವೇದಾಧ್ಯಯನವನ್ನೇ ಇಂದಿನ ಪೀಳಿಗೆ ಬಿಟ್ಟಿರುವ ಸಂದರ್ಭದಲ್ಲೂ ಇದು ಚೈತನ್ಯಕಾರಕ. ಜಾಢ್ಯದಿಂದ ಹೊರಬರಲು ಇಂಥ ಅನುಷ್ಠಾನ ಅಗತ್ಯ. ಇದು ಪ್ರತಿಯೊಬ್ಬರ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕರ್ಮಾಂಗಗಳನ್ನು ಮಾಡಬೇಕು’ ಎಂದು ನರಸಿಂಹ ಭಟ್ ಹೇಳಿದರು.

ADVERTISEMENT

ಉದ್ಯಮಿ ಜಿ.ವಿ.ಹೆಗಡೆ ಕುಟುಂಬದವರು ಸರ್ವಸೇವೆ ನೆರವೇರಿಸಿದರು. ಸವಿತಾ ಸಮಾಜದ ವತಿಯಿಂದ ಈಶ್ವರ ಕೊಡೆಯ ದಂಪತಿ ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಅಮರೇಶ, ಬೀದರ್‌ನ ರಾಮಚಂದ್ರ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.