ದೋಣಿಗಳಿಗೆ ಸಿಕ್ಕ ಭರಪೂರ ತಾರ್ಲೆ ಮೀನು
ಕಾರವಾರ: ಹಲವು ತಿಂಗಳ ಬಳಿಕ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಭರಪೂರ ತಾರ್ಲೆ ಮೀನು (ಭೂತಾಯಿ ಮೀನು) ಲಭಿಸಿದೆ.
ಹವಾಮಾನ ವೈಪರೀತ್ಯದಿಂದ ಎರಡು ವಾರಗಳಿಂದ ಆಳಸಮುದ್ರಕ್ಕೆ ದೋಣಿಗಳು ಮೀನುಬೇಟೆಗೆ ಇಳಿದಿರಲಿಲ್ಲ. ಸೋಮವಾರ ಕಾರವಾರ, ಬೇಲೆಕೇರಿ, ಮುದಗಾ ಭಾಗದ ಟ್ರಾಲರ್, ಪರ್ಸಿನ್ ದೋಣಿಗಳು ಮೀನುಗಾರಿಕೆ ಆರಂಭಿಸಿದ್ದು, ಟನ್‌ಗಟ್ಟಲೆ ತಾರ್ಲೆ ಮೀನು ಬಲೆಗೆ ಸಿಕ್ಕಿದೆ.
'ಕೆಲವೇ ತಾಸಿನಲ್ಲಿ ದೋಣಿಗಳಿಗೆ ಟನ್‌ಗಟ್ಟಲೆ ಮೀನು ಸಿಕ್ಕಿದೆ. ಹಲವು ವರ್ಷಗಳ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ತಾರ್ಲೆ ಮೀನು ಸಿಕ್ಕಿದೆ' ಎಂದು ಮೀನುಗಾರರು ಹೇಳಿದರು.
'ಆಳ ಸಮುದ್ರಕ್ಕೆ ತೆರಳದೇ ತೀರ ಸಮೀಪದಲ್ಲೇ ರಾಶಿ ಮೀನುಗಳು ಸಿಗುತ್ತಿವೆ. ಹವಾಮಾನ ವೈಪರೀತ್ಯದಿಂದ ದೋಣಿಗಳು ಆಳ ಸಮುದ್ರಕ್ಕೆ ಹೋಗಲಾಗುತ್ತಿಲ್ಲ. ಇದರಿಂದ ಬೆಳಕಿನ ಮೀನುಗಾರಿಕೆ ನಡೆಯುವುದೂ ಕಡಿಮೆ ಆಗಿದೆ. ಇದು ಮೀನು ಹೆಚ್ಚು ಲಭಿಸಲು ಕಾರಣ' ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.