ADVERTISEMENT

ಯಲ್ಲಾಪುರ - ದೇಶಪಾಂಡೆನಗರ ಬಸ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:38 IST
Last Updated 23 ಡಿಸೆಂಬರ್ 2025, 7:38 IST
ಯಲ್ಲಾಪುರ - ದೇಶಪಾಂಡೆನಗರ ಬಸ್‌ಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದರು 
ಯಲ್ಲಾಪುರ - ದೇಶಪಾಂಡೆನಗರ ಬಸ್‌ಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದರು    

ಯಲ್ಲಾಪುರ: ʻಹಿಂದುಳಿದ ಗೌಳಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ತಾಲ್ಲೂಕಿನ ಅನೇಕ ಕಡೆ ಹೊಸದಾಗಿ ಬಸ್‌ ಸೌಲಭ್ಯ ಕಲ್ಪಿಸಲಾಗುತ್ತಿದೆʼ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಯಲ್ಲಾಪುರ -ದೇಶಪಾಂಡೆನಗರ ಬಸ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಹಿಂದುಳಿದ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕರಡೊಳ್ಳಿ, ತೆಂಗಿನಗೆರೆ, ಹೊಸಳ್ಳಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಚೆಗೆ ಬಸ್‌ ಸೌಲಭ್ಯ ಆರಂಭಿಸಲಾಗಿದೆ. ಇದು ಸಾರ್ವಜನಿಕರಿಗೂ ಅನುಕೂಲವಾಗಿದೆ. ಇಂದಿನಿಂದ ಹೊಸದಾಗಿ ಬೆಳಿಗ್ಗೆ 8.30ಕ್ಕೆ ಮತ್ತು ಸಂಜೆ 4.45ಕ್ಕೆ ವಿದ್ಯಾರ್ಥಿಗಳಿಗಾಗಿಯೇ ದೇಶಪಾಂಡೆ ನಗರ - ಯಲ್ಲಾಪುರ ಬಸ್‌ ಸಂಚರಿಸಲಿದೆ.

ADVERTISEMENT

ಹಿಂದುಳಿದ ಸಮುದಾಯದ ಅನೇಕ ಮಕ್ಕಳು ಸ್ಥಳೀಯ ಶಾಲೆ ನಂತರ ಕೂಲಿಗೆ ಹೋಗುತ್ತಿದ್ದರು. ಇಂದು ಅವರಿಗೆ ಪಟ್ಟಣದ ಶಾಲಾ-ಕಾಲೇಜುಗಳಿಗೆ ಹೋಗಲು ಅನುಕೂಲವಾಗಿದೆ. ಅವರಿಗಾಗಿಯೇ 5 ಬಸ್‌ಗಳನ್ನು ಬಿಡುವಂತೆ ವ್ಯವಸ್ಥೆ ಮಾಡಲಾಗಿದೆʼ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಉಲ್ಲಾಸ ಶಾನಭಾಗ, ಕೆಎಸ್ಆರ್‌ಟಿಸಿ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೇಕರ, ಪ್ರಮುಖರಾದ ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ಗಂಗಾ ಕೊಕರೆ, ಮಾಕು ಕೊಕರೆ, ರೇಖು ಕೊಕರೆ, ಗಂಗು ಕೊಕರೆ, ಮಾಲು ಕೊಕರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.