
ಕಾರವಾರ: ‘ತಂತ್ರಜ್ಞಾನ ಬೆಳೆದಂತೆ ದುರುಪಯೋಗ, ವಂಚನೆ ಹೆಚ್ಚುತ್ತಿದೆ. ಮೊಬೈಲ್ ಬಳಕೆ ವೇಳೆ ಪ್ರತಿ ಕ್ಷಣ ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪ ಕಾರ್ಯದರ್ಶಿ ಎಂ.ಎಸ್.ಅಲ್ಲಾಭಕ್ಷ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಮೊಬೈಲ್ ಬಳಸುವಾಗ ವಂಚಕರು ಆಸೆ, ಅಮಿಷಗಳನ್ನು ಒಡ್ಡಿ ಕಳುಹಿಸುವ ಸಂದೇಶಗಳನ್ನು ಅರಿಯದೆ ಲಿಂಕ್‌ಗಳಿಗೆ ಪ್ರವೇಶ ಮಾಡುವುದರಿಂದ ವಂಚನೆ ಪ್ರಕರಣ ಹೆಚ್ಚುತ್ತಿದೆ. ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು’ ಎಂದರು.
ಸಿಇಎನ್ ಅಪರಾಧ ಪೊಲೀಸ್ ವಿಭಾಗದ ಡಿಎಸ್‌ಪಿ ಬಿ.ಅಶ್ವಿನಿ ಮಾತನಾಡಿ, ‘ಕೃತಕ ಬುದ್ದಿಮತ್ತೆ (ಎಐ) ಬಗ್ಗೆ ಜಾಗೃತರಾಗಬೇಕು. ಎಐ ಸಂಬಂಧಿತ ಅಪಾಯಗಳನ್ನು ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಯುಪಿಐ ಪೇಮೆಂಟ್ ಪಾವತಿಸುವಾಗ ಹಣ ವರ್ಗಾಯಿಸುವ ಸಂಖ್ಯೆ ಮತ್ತು ಲಿಂಕ್ ಅಧಿಕೃತವಾಗಿ ಖಚಿತ ಪಡಿಸಿಕೊಳ್ಳಿ’ ಎಂದರು.
ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಸಾಯಿ ಸಾಗರ ಜಲ್ಲು ಸುರಕ್ಷಿತ ಅಂತರ್ಜಾಲದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ಹಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬಿಬ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.