ಮುಂಡಗೋಡ: ‘ಪೌರ ಕಾರ್ಮಿಕರ ಕೆಲಸ ಶ್ಲಾಘನೀಯವಾಗಿದ್ದು, ಅವರನ್ನು ಗೌರವಿಸುವುದು ಹೆಮ್ಮೆಯ ವಿಷಯ’ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಜೆ.ಬೆಳ್ಳೆನವರ ಹೇಳಿದರು.
ಇಲ್ಲಿನ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಮೊಹಿಸಿನ್ ಎ ಆಝಮ್ ಮಿಷನ್ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ನಡೆದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಸಿಗಲು ಯಾವುದೇ ಅಡೆತಡೆ ಇರಬಾರದು. ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಮುಂದಿನ ದಿನಗಳಲ್ಲಿ ಕಾನೂನು ತರಬೇತಿ ಶಿಬಿರ ಮಾಡುವಂತೆ ಸಂಘಟಕರಿಗೆ ಮನವಿ ಮಾಡಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮುಸ್ತಾಕ ಅಹ್ಮದ ನೇರ್ತಿ ಮಾತನಾಡಿ, ‘ಶ್ರದ್ಧಾ–ಭಕ್ತಿಯಿಂದ ತಮ್ಮ ಕೆಲಸವನ್ನು ನಿಸ್ವಾರ್ಥವಾಗಿ ಮಾಡುವವರನ್ನು ಗುರುತಿಸಿ, ಗೌರವಿಸುವುದು ಸಂಘಟನೆ ಮುಖ್ಯ ಉದ್ದೇಶವಾಗಿದೆ. ಯಾವುದೇ ಸಮುದಾಯದರವರು ಆರೋಗ್ಯವಂತರಾಗಿರಲು ಪೌರ ಕಾರ್ಮಿಕರ ಸೇವೆ ಅಗತ್ಯವಾಗಿದೆ’ ಎಂದರು.
ಮುಖಂಡರಾದ ಎಂ.ಎಸ್.ನಂದಿಗಟ್ಟಿ, ಸಯ್ಯದ ಸರ್ಫರಾಜ್ ಅಹ್ಮದ್ ಆಶ್ರಫಿ, ಮುಸ್ತಾಕ ಮುಜಾವರ, ಮಮ್ಮದಗೌಸ್ ದುಂಡಶಿ, ನೂರಅಹ್ಮದ್ ಗಡವಾಲೆ, ಮಹಮ್ಮದ್ ಲಡ್ಡುಪೀರ, ಮುಸ್ತಾಕ ಕಾಡವಾಡ, ಎನ್.ಎಮ್.ದರ್ಗಾವಾಲೆ, ಸೈಯದ ಮಕಬುಲ್, ಅಹ್ಮದರಜಾ ಪಠಾಣ ಮಮ್ಮದಗೌಸ್ ಮಕಾನದಾರ, ಮಮ್ಮದ ಜಾಫರ ಹಂಡಿ, ಇಜಾಜ್ ರೋಣ, ರಷೀದ್ ಪೋಕಾಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.