ADVERTISEMENT

ಕಾರವಾರ: ಸರಳವಾಗಿ ನೆರವೇರಿದ ನಾಗರಪಂಚಮಿ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:55 IST
Last Updated 25 ಜುಲೈ 2020, 7:55 IST
ಪೂಜೆ ಸಲ್ಲಿಸುತ್ತಿರುವ ಮಹಿಳೆಯರು
ಪೂಜೆ ಸಲ್ಲಿಸುತ್ತಿರುವ ಮಹಿಳೆಯರು    

ಕಾರವಾರ: ನಾಗರಪಂಚಮಿ ನಿಮಿತ್ತ ನಗರದಲ್ಲಿ ಶನಿವಾರ ನಾಗನಕಟ್ಟೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕೊರೊನಾ ಕಾರಣದಿಂದ ಈ ಬಾರಿ ದೇಗುಲಗಳ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಪ್ರತಿವರ್ಷದ ರೀತಿಯ ಹಬ್ಬದ ಸಡಗರ ಕಾಣಲಿಲ್ಲ.

ನಗರದ ಕೋಡಿಬಾಗ ರಸ್ತೆಯಲ್ಲಿರುವ ಬ್ರಹ್ಮದೇವ ದೇವಸ್ಥಾನದ ಬಳಿಯ ನಾಗನಕಟ್ಟೆಗೆ ನೂರಾರು ಭಕ್ತರು ಕ್ಷೀರಾಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ಊದುಬತ್ತಿ, ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ನಾಗರಕಟ್ಟೆಯನ್ನು ಹೂಗಳಿಂದ ಅಲಂಕರಿಸಲಾಗಿತ್ತು.

ಭಕ್ತರಿಗೆ ನಿರಾಸೆ:ನಗರದ ಬಾಡದಲ್ಲಿರುವ ನಾಗಬ್ರಹ್ಮ ದೇವಸ್ಥಾನವು ಪ್ರತಿ ವರ್ಷ ನಾಗರಪಂಚಮಿಯಂದು ಭಕ್ತರಿಂದ ತುಂಬಿರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ದೇವಾಲಯದ ಬಾಗಿಲು ತೆರೆದಿರಲಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಯಿತು. ಹಲವರು ಫಲ ಪುಷ್ಪಗಳನ್ನು ಹಿಡಿದುಕೊಂಡು ದೇಗುಲದ ಹೊರಗಿನಿಂದಲೇ ಪ್ರಾರ್ಥನೆ ಸಲ್ಲಿಸಿದ್ದು ಕಂಡುಬಂತು. ಅನೇಕರು ಮನೆಗಳಲ್ಲಿ ಹಬ್ಬದ ವಿಶೇಷ ಅಡುಗೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.