ADVERTISEMENT

ಗುಜರಾತ್‌ನಲ್ಲಿ ಡಿಜಿಪಿಯಾಗಿ ಬಡ್ತಿ ಹೊಂದಿದ ಯಲ್ಲಾಪುರದ ನರಸಿಂಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:19 IST
Last Updated 6 ಜನವರಿ 2026, 7:19 IST
ನರಸಿಂಹ ಕೋಮಾರ
ನರಸಿಂಹ ಕೋಮಾರ   

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಗಾರ ಗ್ರಾಮದ ನರಸಿಂಹ ಕೋಮಾರ ಅವರಿಗೆ ಗುಜರಾತ್‌ ರಾಜ್ಯದ ವಡೋದರಾ ನಗರದ ಪೊಲೀಸ್ ಕಮಿಷನರ್ ಹುದ್ದೆಯಿಂದ ಈಚೆಗೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಶ್ರೇಣಿಗೆ ಬಡ್ತಿ ನೀಡಲಾಗಿದೆ.

ನರಸಿಂಹ  ಅವರು ಗುಜರಾತ್ ಕೇಡರ್‌ನ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಬೆಂಗಳೂರಿನ ಯುವಿಸಿಇಯಿಂದ ಬಿ.ಇ (ಎಲೆಕ್ಟ್ರಿಕಲ್) ಪದವಿ ಪಡೆದಿದ್ದಾರೆ ಮತ್ತು ಬೆಂಗಳೂರಿನ ಐಐಎಂ ಹಾಗೂ ಅಮೆರಿಕದ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗುಜರಾತ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು ಕೇಂದ್ರ ಸರ್ಕಾರದ ನಿಯೋಜನೆಯ ಮೇರೆಗೆ ಕೇಂದ್ರ ತನಿಖಾ ದಳದಲ್ಲಿ (ಸಿಬಿಐ) 7 ವರ್ಷ ಕೆಲಸ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT