ADVERTISEMENT

ಕ್ರೀಡಾ ದಿನಾಚರಣೆ: ವಿವಿಧ ಸ್ಪರ್ಧೆ, ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:19 IST
Last Updated 29 ಆಗಸ್ಟ್ 2022, 16:19 IST
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಕಾರವಾರದಲ್ಲಿ ಸೋಮವಾರ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವರು
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಕಾರವಾರದಲ್ಲಿ ಸೋಮವಾರ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವರು   

ಕಾರವಾರ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಸೋಮವಾರ, ರಾಷ್ಟ್ರಿಯ ಕ್ರೀಡಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ನೆಹರೂ ಯುವ ಕೇಂದ್ರ ಮತ್ತು ಕಡಲ ಸಿರಿ ಯುವ ಸಂಘದಿಂದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಎದುರು ಮೇಲ್ಸೇತುವೆಯಲ್ಲಿ ಮ್ಯಾರಥಾನ್ ರಿಲೇ, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಡಿ.ವೈ.ಎಸ್.ಪಿ ವ್ಯಾಲೆಂಟೈನ್ ಡಿಸೋಜಾ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ, ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ– ಆಪರೇಟಿವ್‌ನ ಪ್ರಧಾನ ವ್ಯವಸ್ಥಾಪಕ ಜಾರ್ಜ್ ಫರ್ನಾಂಡಿಸ್ ಭಾಗವಹಿಸಿದ್ದರು.

ADVERTISEMENT

ಜಿಲ್ಲಾ ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ ಕ್ರೀಡೆಗಳನ್ನು ನಡೆಸಿಕೊಟ್ಟರು. ಬಂದರು ಇಲಾಖೆ ಅಧಿಕಾರಿ ಸುರೇಶ್ ಶೆಟ್ಟಿ, ಯೂನಿಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜಾಸಾಬ ಡೆಂಗಣ್ಣನವರ, ನೆಹರೂ ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ, ಕಡಲ ಸಿರಿ ಯುವ ಸಂಘದ ಅಧ್ಯಕ್ಷ ಪ್ರಕಾಶ್ ಭೋವಿ, ಉಪಾಧ್ಯಕ್ಷ ಅಭಿಷೇಕ ಕಳಸ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೇಟ್, ಸದಸ್ಯರಾದ ನೊಯಲ್ ಕೊಯ್ಲೋ, ಪ್ರಸಾದ ಕಳಸ ಇದ್ದರು.

ವಿಜೇತರು:

4×400 ಮೀಟರ್ (ಬಾಲಕರು) ಪ್ರಥಮ ಸ್ಥಾನ: ಪ್ರಥಮ್ ಬಾನಾವಳಿ, ನಿಖಿಲ್ ಬಾನಾವಳಿ, ಆಯುಷ್ ಬಾನಾವಳಿ, ಸೂರ್ಯ ಚೌಹಾಣ್. ದ್ವಿತೀಯ ಸ್ಥಾನ: ಸುಶಾಂತ್ ಮಣಕಿಕರ್, ಪ್ರಥಮ್ ಪಾವಸ್ಕರ್, ದಕ್ಷ್ ರಾವತ್, ಗಣೇಶ ಬಾಲರಾಜ್.

4 ×600 ಮೀಟರ್:

(17 ವರ್ಷದ ಒಳಗಿನ ಬಾಲಕರು) ಪ್ರಥಮ: ಅದ್ನಾನ್ ಖಾನ್, ಸಂದೀಪ ಚೌಹಾಣ್, ಅಫ್ರೀದಿ ಸಯೀದ್, ಝಯೀಮ್ ದೊಡ್ಮನಿ. ದ್ವಿತೀಯ: ಕಾರ್ತಿಕ್ ನಾಯ್ಕ, ಅಮಿತ್ ಚವಾಣ್, ಅರ್ಮಾನ್ ಅಲಿ, ರಾಮು ತೋರಟ್.

ಮುಕ್ತ ವಿಭಾಗದಲ್ಲಿ ಪ್ರಥಮ: ಉಮೇಶ ಲಮಾಣಿ, ಗೌತಮ್ ಗೌಡ, ಸೋಮು ಗೌಡ, ಕಾರ್ತಿಕ್ ನಾಯ್ಕ. ದ್ವಿತೀಯ: ಸಂತೋಷ ಲಂಬೋರೆ, ಸುನೀಲ್ ಬಜರಿ, ಶ್ಯಾಮ್ ‍ಪಿಳ್ಳೈ, ತಿಪ್ಪಣ್ಣ ಬ್ಯಾಕೋಡ್. ತೃತೀಯ: ದರ್ಶನ್ ಗುನಗಿ, ದರ್ಶನ್ ಲಾಡ್, ಪ್ರಜ್ವನ್ ಆರ್.ಡಿ, ನಾಗರಾಜ ಗದಗ.

ಹಗ್ಗಜಗ್ಗಾಟದಲ್ಲಿ ಮಹಾ ದೇವಿ ಬಾಯ್ಸ್ ತಂಡವು ಜಯಶಾಲಿಯಾಯಿತು.

ಕ್ರೀಡಾ ರಸಪ್ರಶ್ನೆ ಸ್ಪರ್ಧೆ:

ಕಾರವಾರ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪ್ರತಿಷ್ಠಾನದಿಂದ ಸೋಮವಾರ ಕ್ರೀಡಾ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.

ಜಿಲ್ಲೆಯ 42 ಶಾಲಾ ಕಾಲೇಜುಗಳ1,500ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೈಗಾದ ಕ್ವಿಜ್ ಮಾಸ್ಟರ್ ಶ್ರೀನಿವಾಸ ಪಂಚಮುಖಿ ರಸಪ್ರಶ್ನೆಗಳನ್ನು ಸಿದ್ಧಪಡಿಸಿದ್ದರು. ಸ್ಪರ್ಧೆಯ ಪ್ರಾಯೋಜಕತ್ವವನ್ನುಅಮೆರಿಕೆದಲ್ಲಿ ನೆಲೆಸಿರುವ ಹಳಿಯಾಳದ
ಸಾಫ್ಟ್‌ವೇರ್ ಎಂಜಿನಿಯರ್ಮಹೇಶ ಮೋಹನ ಹೂಲಿ ವಹಿಸಿಕೊಂಡಿದ್ದರು.

ವಿಜೇತ 155ವಿದ್ಯಾರ್ಥಿಗಳಿಗೆಪ್ರಮಾಣಪತ್ರದ ಜೊತೆರಾಷ್ಟ್ರಧ್ವಜ, ಲಾಂಛನಗಳ ಕುರಿತು ಜಿ.ಪಿ.ರಾಜರತ್ನಂ ವಿರಚಿತ‘ಅಶೋಕ ಧರ್ಮಚಕ್ರ ಧ್ವಜ’ಹಾಗೂ ಬಿ.ಎ.ಸನದಿ ಅನುವಾದಿತ ರಾಮಮನೋಹರ ಲೋಹಿಯಾ ಅವರ‘ಮಹಾತ್ಮ ಗಾಂಧೀಜಿ’ಕೃತಿಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.