ADVERTISEMENT

ಕೋವಿಡ್‌ನಿಂದ ಒಂಬತ್ತು ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 14:14 IST
Last Updated 9 ಜೂನ್ 2020, 14:14 IST

ಕಾರವಾರ: ಕೋವಿಡ್ 19ನಿಂದ ಗುಣಮುಖರಾದ ಒಂಬತ್ತು ಮಂದಿಯನ್ನು ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ಕ್ರಿಮ್ಸ್) ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಸದ್ಯ ಆಸ್ಪತ್ರೆಯಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 84ಸೋಂಕಿತರು ‘ಕ್ರಿಮ್ಸ್’ಗೆ ದಾಖಲಾಗಿದ್ದು, ಈವರೆಗೆ 70 ಮಂದಿ ಸಂಪೂರ್ಣವಾಗಿ ಸೋಂಕುಮುಕ್ತರಾಗಿದ್ದಾರೆ.

ಮಂಗಳವಾರ ಬಿಡುಗಡೆಯಾದವರ ಪೈಕಿ ನಾಲ್ವರು ಕುಮಟಾದವರು, ತಲಾ ಇಬ್ಬರು ಶಿರಸಿ ಮತ್ತು ಸಿದ್ದಾಪುರದವರು ಹಾಗೂ ಹಳಿಯಾಳದ ನಾಲ್ಕು ವರ್ಷದ ಬಾಲಕ ಸೇರಿದ್ದಾರೆ ಎಂದುಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಎರಡು ದಿನಗಳಿಂದ ಕೋವಿಡ್ 19ನ ಹೊಸ ಪ್ರಕರಣಗಳು ವರದಿಯಾಗಿಲ್ಲ. ಇದು ಸಾರ್ವಜನಿಕರ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.