ADVERTISEMENT

ಹೆದ್ದಾರಿ ಮೇಲೆ ನೀರು: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 13:00 IST
Last Updated 5 ಜುಲೈ 2019, 13:00 IST
ಕಾರವಾರ ತಾಲ್ಲೂಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಬೆಳಿಗ್ಗೆ ಮಳೆ ನೀರು ನಿಂತಿದ್ದ ಕಾರಣ ವಾಹನ ಸವಾರರು ತೊಂದರೆಗೊಳಗಾದರು
ಕಾರವಾರ ತಾಲ್ಲೂಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಬೆಳಿಗ್ಗೆ ಮಳೆ ನೀರು ನಿಂತಿದ್ದ ಕಾರಣ ವಾಹನ ಸವಾರರು ತೊಂದರೆಗೊಳಗಾದರು   

ಕಾರವಾರ:ತಾಲ್ಲೂಕಿನ ಅರಗಾದಲ್ಲಿ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಯಿತು. ಹೆದ್ದಾರಿ ಕಾಮಗಾರಿಗೆಂದು ಚರಂಡಿಗೆ ಮಣ್ಣು ಸೇರಿಸಿದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಸಾರ್ವಜನಿಕರು ಪರದಾಡುವಂತಾಯಿತು.

ಅರಗಾದ ಮೇಲಿನಕೇರಿಯಲ್ಲಿ ಸುಮಾರು 10 ಮನೆಗಳ ಆವರಣದಲ್ಲಿ ನೀರು ನಿಂತ ಕಾರಣಅಲ್ಲಿನ ನಿವಾಸಿಗಳ ಓಡಾಟಕ್ಕೆ ಸಮಸ್ಯೆಯಾಯಿತು.ಸಂಕ್ರುಬಾಗ, ಚೆಂಡಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡ ಮಳೆ ನೀರು ಉಕ್ಕಿ ಹರಿದು ತೊಂದರೆಯಾಯಿತು.

ಸ್ಥಳೀಯ ನಿವಾಸಿ ಸುರೇಖಾ ಬಾಂದೇಕರ ಅವರ ಮನೆಯ ಮೆಟ್ಟಿಲಿನವರೆಗೆನೀರು ನಿಂತಿತ್ತು. ಈ ಬಗ್ಗೆ ಅಳಲು ತೋಡಿಕೊಂಡ ಅವರು, ‘ಈ ಭಾಗದಲ್ಲಿ ಮೊದಲು ರಾಜಕಾಲುವೆ ಇತ್ತು. ಆದರೆ, ಈಗಅದನ್ನು ಮುಚ್ಚಿಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದರ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರಿದ್ದರೂ ಪ್ರಯೋಜನವಾಗಿಲ್ಲ. ಇದರೊಂದಿಗೆ ಹೆದ್ದಾರಿಯ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕೂಡ ಅವೈಜ್ಞಾನಿಕ ಕೆಲಸ ಮಾಡಿದೆ. ಇಂತಹ ನಿರ್ಲಕ್ಷ್ಯದಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ’ ಎಂದರು.

ADVERTISEMENT

ಹೆದ್ದಾರಿ ಕಾಮಗಾರಿಯ ಸಂದರ್ಭ ಚರಂಡಿಗೆ ಸೂಕ್ತ ಜಾಗ ಕೊಡದಿರುವುದೇ ರಸ್ತೆಯಲ್ಲಿ ನೀರು ನಿಲ್ಲಲು ಕಾರಣವಾಗಿದೆ.ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ನಾಗರಿಕರೆಲ್ಲರೂ ಮೊಣಕಾಲುದ್ದ ನಿಂತಿದ್ದ ನೀರಿನಲ್ಲೇ ಹೆಜ್ಜೆ ಹಾಕಿ ರಸ್ತೆ ದಾಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.