
ಪ್ರಜಾವಾಣಿ ವಾರ್ತೆ
ಬಂಧನ
(ಪ್ರಾತಿನಿಧಿಕ ಚಿತ್ರ)
ಭಟ್ಕಳ: ಭಟ್ಕಳದಲ್ಲಿ ಪಡಿತರದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ಗಣೇಶ ನಗರ ಮುಗಳಿಹೊಂಡ ನಿವಾಸಿಗಳಾದ ಸಮೀರ ಮೊಹಮ್ಮದ ಬಾಷಾ (27), ಸಬೀಲ್ ಮಹಮ್ಮದ ಬಾಷಾ (25), ರಾಮನಗರ ಜಿಲ್ಲೆ ರಂಗೇನಹಳ್ಳಿ ನಿವಾಸಿ ಮಲ್ಲಿಕಾರ್ಜುನ್ ಆರ್. (23), ತುಮಕೂರು ಜಿಲ್ಲೆ ಕುಣಿಗಲ್ ನಿವಾಸಿ ನಿತಿನ್ ಎಚ್.ಎಸ್. ಬಂಧಿತರು.
ಅಕ್ಕಿ ಸಾಗಿಸಲು ಬಳಸಲಾಗಿದ್ದ 3 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದ ತಂಡ ಹಾಗೂ ಆಹಾರ ನಿರೀಕ್ಷಕ ಉದಯ ತಳವಾರ ಅವರ ಸಹಯೋಗದಲ್ಲಿ ನಡೆಸಿದ ದಾಳಿಯಲ್ಲಿ ಅಂದಾಜು ₹ 3.87 ಲಕ್ಷ ಮೌಲ್ಯದ 11,400 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.