ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಕುಣಬಿ ಸಮುದಾಯ ಭವನದಲ್ಲಿ ನಡೆದ ಗೆಡ್ಡೆ ಗೆಣಸು ಮೇಳದಲ್ಲಿ, ಹತ್ತಾರು ಬಗೆಯ ಗೆಡ್ಡೆಗೆಣಸುಗಳು, ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳು ಮತ್ತು ಹತ್ತಾರು ಬಗೆಯ ಉತ್ಪನ್ನಗಳು ಗಮನ ಸೆಳೆದವು. ಮನೆ ಬಳಕೆಗೆ ಮಾತ್ರ ಬೆಳೆಯುತ್ತಿದ್ದ ಗೆಡ್ಡೆಗೆಣಸುಗಳನ್ನು ಬ್ರ್ಯಾಂಡ್ ಆಗಿಸಲು 11 ವರ್ಷಗಳಿಂದ ಗೆಡ್ಡೆಗೆಣಸು ಮೇಳ ಆಯೋಜಿಸುವ ಮೂಲಕ ಕುಣಬಿ ಸಮಾಜ ಅಭಿವೃದ್ಧಿ ಸಂಘವು ಒದಗಿಸಿದ ವೇದಿಕೆಯನ್ನು ಬೆಳೆಗಾರರು ಸದುಪಯೋಗ ಪಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.