ಕಾರವಾರ: ಅಂಕೋಲಾ ತಾಲ್ಲೂಕಿನ ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-63 ಪಕ್ಕದ ನಿರ್ಜನ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಕಾರಿನಲ್ಲಿ ₹1.14 ಕೋಟಿ ನಗದು ಪತ್ತೆಯಾಗಿದೆ.
ವಾರಸುದಾರರಿಲ್ಲದೆ ನಿಂತಿದ್ದ ಕಾರಿನ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
'ಹೆದ್ದಾರಿ ಪಕ್ಕದ ಕಾಡಂಚಿನಲ್ಲಿ ಮಂಗಳವಾರ ನಸುಕಿನ ಜಾವದಿಂದಲೂ ಕಾರು ನಿಂತಿತ್ತು. ಕಾರಿನ ನೋಂದಣಿ ಸಂಖ್ಯೆ ನಕಲಿಯಾಗಿದೆ. ಬೇರೊಂದು ಕಾರಿನ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬರಲಾಗಿದೆ. ಕಾರಿನಲ್ಲಿ ₹1,14,99,500 ನಗದು ಕಾರಿನಲ್ಲಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ' ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.
'ಕಾರಿನ ಕಿಟಕಿ ಗಾಜುಗಳು ಒಡೆದಿದ್ದವು. ಚಾಲಕನ ಸೀಟಿನ ಅಡಿಯಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ ಹಣ ಇರಿಸಲಾಗಿತ್ತು. ಹವಾಲಾ ದಂಧೆಯಲ್ಲಿ ತೊಡಗಿದವರು ಹಣ ಸಾಗಿಸುತ್ತಿರುವ ಶಂಕೆ ಇದೆ. ತನಿಖೆ ನಡೆಸಲಾಗುತ್ತಿದೆ' ಎಂದೂ ತಿಳಿಸಿದ್ದಾರೆ.
ಹಣ ಸಿಕ್ಕಿರುವ ಕಾರನ್ನು ಅಂಕೋಲಾ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿಡಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.