ಕಾರವಾರ: 130 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಂತೆ ಹೋಳಾಗಿ, ಹಾಳಾಗಿ ದೇಶ ಹಾಳು ಮಾಡಿದ ಸಂಘಟನೆ ಆರ್‌ಎಸ್‌ಎಸ್ ಅಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಇಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಲಕ್ಷಾಂತರ ಸ್ವಯಂ ಸೇವಕರ ಶ್ರಮದಿಂದ ಆರ್‌ಎಸ್ಎಸ್ ಬಲಿಷ್ಠಗೊಂಡಿದೆ. ನೂರು ವರ್ಷ ಪೂರೈಸಿದ ನಂತರವೂ ಒಡೆಯದೆ, ಒಗ್ಗೂಡಿ ನಿಂತಿದೆ. ಪ್ರಿಯಾಂಕ್ ಖರ್ಗೆಯಂತವರು ಇದನ್ನು ಅರಿತುಕೊಳ್ಳಲಿ. ಭಾರತ್ ಮಾತೆಗೆ ಜಯವಾಗಲಿ ರಂದು ಘೋಷಣೆ ಕೂಗುವ ಸ್ವಯಂ ಸೇವಕರ ಧ್ವನಿ ಹತ್ತಿಕ್ಕಲು ಆಸಕ್ತಿ ತೋರುತ್ತಿರುವ ಕಾಂಗ್ರೆಸ್ ವಿಧಾನಸೌಧದಲ್ಲಿ, ರಾಜ್ಯದ ವಿವಿಧೆಡೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಜರುಗಿಸಲಿಲ್ಲ' ಎಂದರು.
'ಆರ್‌ಎಸ್ಎಸ್‌ನ್ನು ತಾಲಿಬಾನ್‌ಗೆ ಹೋಲಿಸುವ ಬಿ.ಕೆ.ಹರಿಪ್ರಸಾದ್ ಅವರಿಗೆ ಸಂಘದ ಸಿದ್ಧಾಂತಕ್ಕೂ, ತಾಲಿಬಾನ್ ಸಿದ್ಧಾಂತಕ್ಕೂ ವ್ಯತ್ಯಾಸ ತಿಳಿದಿಲ್ಲವೆ?' ಎಂದು ಪ್ರಶ್ನಿಸಿದರು.
'ಆರ್‌ಎಸ್ಎಸ್ ಚಟುವಟಿಕೆಗೆ ಸರ್ಕಾರಿ ಜಾಗವೇ ಬೇಕೆಂದಿಲ್ಲ. ದೇಶದಲ್ಲಿ ಸಾಕಷ್ಟು ಜಾಗವಿದೆ. ಜಗತ್ತಿನ 250 ದೇಶಗಳಲ್ಲಿ ಆರ್‌ಎಸ್ಎಸ್ ಕೆಲಸ ಮಾಡುತ್ತಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.