ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ಸ್ಕಿ ಅವರಿಗೆ ಶನಿವಾರ ಗೋಕರ್ಣದಲ್ಲಿ ಮೋಕ್ಷ ಕಾರ್ಯ ನೆರವೇರಿಸಲಾಯಿತು. ನಾರಾಯಣ ಬಲಿ ಪೂರ್ವಕವಾಗಿ ಅವರಿಗೆ ಪಿಂಡ ಪ್ರದಾನ ಮಾಡಲಾಯಿತು.
‘ಗೋಕರ್ಣವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಸೆರ್ಗೆಯ್ ಭಾರತಕ್ಕೆ ಬಂದಾಗ, ಹಿಂದೂ ಧರ್ಮದತ್ತ ಆಕರ್ಷಣೆ ಹೊಂದಿದ್ದರು. ವಾರಾಣಸಿಯಲ್ಲಿ ಸಂಸ್ಕೃತ, ವೇದ ಮಂತ್ರ ಕಲಿತು, ಸ್ವತಃ ಹೋಮ ಹವನ ಮಾಡಲು ಪ್ರಾರಂಭಿಸಿ ‘ಸೆರ್ಗೆಯ್ ಬಾಬಾ’ ಆಗಿದ್ದರು. ಸಾವಿರಕ್ಕೂ ಹೆಚ್ಚು ಶಿಷ್ಯರನ್ನು ಹೊಂದಿದ್ದರು. 18 ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದರು. ಸೇನೆ ತೊರೆದಿದ್ದ ಸೆರ್ಗೆಯ್, ಯುದ್ಧ ಘೋಷಣೆಯಾದ ಕೂಡಲೇ ಪುನಃ ಸೇರಿದ್ದರು. ಏಪ್ರಿಲ್ 26ರಂದು ಯುದ್ಧದಲ್ಲಿ ಮಡಿದಿದ್ದರು’ ಎಂದು ಗೋಕರ್ಣದಲ್ಲಿ ಅವರ ಒಡನಾಡಿ ಪರಮೇಶ್ವರ ಶಾಸ್ತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.