ADVERTISEMENT

ಹಲವು ಸೂಪರ್ ಫಾಸ್ಟ್ ವಿಶೇಷ ರೈಲುಗಳ ಸೇವೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 15:25 IST
Last Updated 19 ಮಾರ್ಚ್ 2021, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ವಿಶೇಷ ಸೂಪರ್ ಫಾಸ್ಟ್ ರೈಲುಗಳ ಸಂಚಾರದ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲುಗಳು: 02620 ಸಂಖ್ಯೆಯ ಮಂಗಳೂರು ಸೆಂಟ್ರಲ್– ಲೋಕಮಾನ್ಯ ತಿಲಕ್ (ಟಿ) (ಪ್ರತಿದಿನ) ರೈಲಿನ ಸಂಚಾರವನ್ನು ಏ.1ರಿಂದ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. 02619 ಸಂಖ್ಯೆಯ ಲೋಕಮಾನ್ಯ ತಿಲಕ್ (ಟಿ)– ಮಂಗಳೂರು ಸೆಂಟ್ರಲ್ ರೈಲು ಏ.2ರ ಬದಲು ಜುಲೈ 1ರ ವರೆಗೆ ಸಂಚರಿಸಲಿದೆ.

06072 ಸಂಖ್ಯೆಯ ತಿರುನಲ್ವೇಲಿ– ದಾದರ್ ನಡುವೆ ಪ್ರತಿ ಬುಧವಾರದ ವೀಕ್ಲಿ ರೈಲು ಜೂನ್ 30ರ ತನಕ, ಪ್ರತಿ ಗುರುವಾರದ 06071 ಸಂಖ್ಯೆಯ ದಾದರ್– ತಿರುನಲ್ವೇಲಿ ರೈಲು ಜುಲೈ 1ರ ವರೆಗೆ ಪ್ರಯಾಣಿಸಲಿದೆ.

ADVERTISEMENT

‘ನಿಜಾಮುದ್ದೀನ್– ತಿರುವನಂತಪುರಂ ಸೆಂಟ್ರಲ್– ನಿಜಾಮುದ್ದೀನ್’ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಮಾರ್ಚ್ 26ರಂದು ಸಂಚರಿಸಲಿದೆ. 04034 ಮತ್ತು 04033 ಸಂಖ್ಯೆಯ ರೈಲಿನಲ್ಲಿ ಸಂಪೂರ್ಣ ಮುಂಗಡ ಕಾಯ್ದಿರಿಸುವಿಕೆ ಆಧಾರದಲ್ಲಿ ಪ್ರಯಾಣಿಸಬಹುದು.

ನಿಜಾಮುದ್ದೀನ್ ನಿಲ್ದಾಣದಿಂದ ಮಾರ್ಚ್ 26ರಂದು ಬೆಳಿಗ್ಗೆ ಪ್ರಯಾಣಿಸಲಿರುವ ರೈಲು, ತಿರುವನಂತಪುರಂಗೆ 29ರಂದು ಬೆಳಿಗ್ಗೆ 04:55ಕ್ಕೆ ತಲುಪಲಿದೆ. ಮಾರ್ಚ್ 31ರಂದು ರಾತ್ರಿ 12.30ಕ್ಕೆ ಪ್ರಯಾಣ ಆರಂಭಿಸಲಿರುವ ರೈಲು, ಮರುದಿನ ರಾತ್ರಿ 10.40ಕ್ಕೆ ನಿಜಾಮುದ್ದೀನ್‌ಗೆ ತಲುಪಲಿದೆ. ಈ ರೈಲಿಗೆ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.