ಗೋಕರ್ಣ: ‘ಶಂಕರಾಚಾರ್ಯರು ಗೋಕರ್ಣಕ್ಕೆ ಮೂರು ಸಲ ಭೇಟಿ ನೀಡಿದ್ದು, ಮಹಾಬಲೇಶ್ವರನ ದರ್ಶನವನ್ನೂ ಪಡೆದಿದ್ದರು. ಅದರ ಕುರುಹಿಗಾಗಿ ಆಚಾರ್ಯರ 6 ಪಾದುಕೆಗಳು ಗೋಕರ್ಣದಲ್ಲಿ ನಿದರ್ಶನಕ್ಕೆ ಬರುತ್ತಿದೆ’ ಎಂದು ಯಡತೊರೆಯ ಯೋಗಾನಂದ ಸರಸ್ವತಿ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣಕ್ಕೆ ಭೇಟಿ ನೀಡಿರುವ ಅವರು ಮಂಗಳವಾರ ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆಸಿ, ‘ಶಾಂಕರಜ್ಯೋತಿ ಪ್ರಕಾಶ ಕಾರ್ಯಯೋಜನೆಯ ನಿಮಿತ್ತ ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.
‘ಶಂಕರಾಚಾರ್ಯರ ಪಾದುಕೆಗಳು ಇರುವ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಗೋಗರ್ಭ ಗುಹೆಯಲ್ಲಿ ಶಂಕರಾಚಾರ್ಯರು ತಪಸ್ಸನ್ನು ಮಾಡಿದ್ದಾರೆ. ಗೋಗರ್ಭ ಗುಹೆಯ ಸಂರಕ್ಷಣೆ ಆಗಬೇಕು. ಇಲ್ಲಿ ಅನೈತಿಕ ಚಟುವಟಿಕೆ ನಡೆಯಲು ಅವಕಾಶ ನೀಡಬಾರದು’ ಎಂದರು.
ಗೋಗರ್ಭ ಗುಹೆಯಲ್ಲಿ ಹಲವು ಕಾಲ ಧ್ಯಾನ ಕೈಗೊಂಡ ಸ್ವಾಮೀಜಿ, ಕುಡ್ಲೆ ಬೀಚಿನ ಪರ್ವತದಲ್ಲಿರುವ ಪುರಾಣ ಪ್ರಸಿದ್ಧ ಉಮಾಮಹೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.