
ಪ್ರಜಾವಾಣಿ ವಾರ್ತೆ
ಮುಂಡಗೋಡ: ಇಲ್ಲಿನ ಕಂಬಾರಗಟ್ಟಿ ಪ್ಲಾಟ್‌ನಲ್ಲಿ ಮನೆಯ ಪಾಯ ತೆಗೆಯುವಾಗ ಕಾಣಿಸಿಕೊಂಡ ದೊಡ್ಡ ಗಾತ್ರದ ನೀರು ಹಾವನ್ನು ಹಿಡಿಯುವ ಸಂದರ್ಭದಲ್ಲಿ, ಸುಮಾರು 35 ರಿಂದ 40 ನೀರು ಹಾವಿನ ಮೊಟ್ಟೆಗಳು ಕಂಡುಬಂದಿದ್ದವು.
ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ, ಹಾವನ್ನು ಹಿಡಿದು, ಸೂಕ್ತ ಆವಾಸ ಸ್ಥಾನಕ್ಕೆ ಬಿಟ್ಟರು. ಮೊಟ್ಟೆಗಳನ್ನು ಸಂಗ್ರಹಿಸಿದರು.
ʼಸಂಗ್ರಹಿಸಿದ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಮರಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ, ನಾಗರಹಾವಿನ 35ಕ್ಕೂ ಹೆಚ್ಚಿನ ಮೊಟ್ಟೆಗಳನ್ನು ಸಂಗ್ರಹಿಸಿ, ಮರಿಗಳನ್ನಾಗಿ ಮಾಡಿ, ಸೂಕ್ತ ಸ್ಥಳದಲ್ಲಿ ಬಿಡಲಾಗಿತ್ತು. ಮನೆಯ ಹಿಂದೆ, ಮರಿಗಳನ್ನಾಗಿ ಮಾಡಲು ಅಗತ್ಯ ಏರ್ಪಾಟು ಮಾಡಲಾಗಿದೆʼ ಎಂದು ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಹೇಳಿದರು.
ಉಪವಲಯ ಅರಣ್ಯ ಅಧಿಕಾರಿ ಅಜ್ಜಪ್ಪ, ನಾಗರಾಜ ಗುಬ್ಬಕ್ಕನವರ ಇದ್ದರು.