ADVERTISEMENT

ಕಾರವಾರ | ಕಂಕಣ ಗ್ರಹಣ ನೋಡಲು ‘ಸನ್‌ ಪ್ರೊಜೆಕ್ಟರ್’

ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 2:02 IST
Last Updated 26 ಡಿಸೆಂಬರ್ 2019, 2:02 IST
ಕಾರವಾರದ ವಿಜ್ಞಾನ ಕೇಂದ್ರದಲ್ಲಿರುವ ಸನ್ ಪ್ರೊಜೆಕ್ಟರ್‌ನಲ್ಲಿ ಸೂರ್ಯ ಪ್ರತಿಫಲನಗೊಂಡಿರುವುದು
ಕಾರವಾರದ ವಿಜ್ಞಾನ ಕೇಂದ್ರದಲ್ಲಿರುವ ಸನ್ ಪ್ರೊಜೆಕ್ಟರ್‌ನಲ್ಲಿ ಸೂರ್ಯ ಪ್ರತಿಫಲನಗೊಂಡಿರುವುದು   

ಕಾರವಾರ: ಗುರುವಾರಆಗಲಿರುವಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲುನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 8.03ಕ್ಕೆ ಗ್ರಹಣ ಪ್ರಾರಂಭವಾಗಿ 11.03ಕ್ಕೆ ಮುಕ್ತಾಯಗೊಳ್ಳಲಿದೆ.

‘ಕರಾವಳಿ ಭಾಗದಲ್ಲಿ ಶೇ 90ರಷ್ಟು ಮಾತ್ರ ಗ್ರಹಣ ಸಂಭವಿಸಲಿದೆ.ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಿಸಲು ಅವಕಾಶ ನೀಡಿದ್ದೇವೆ.ವೀಕ್ಷಣೆಗೆ ಬೆಂಗಳೂರು ಜವಾಹರಲಾಲ್ ನೆಹರೂ ತಾರಾಲಯದಿಂದಸನ್ ಪ್ರೊಜೆಕ್ಟರ್ ತರಿಸಲಾಗಿದೆ. ಶಾಲಾ ಮಕ್ಕಳಿಗಾಗಿ ಆರುಪಿನ್‌ಹೋಲ್ ಕ್ಯಾಮೆರಾಗಳ ವ್ಯವಸ್ಥೆ ಮಾಡಿದ್ದೇವೆ. 22 ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿದೆ’ ಎಂದುಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತಾಮಾಹಿತಿ ನೀಡಿದರು.

‘ಸೂರ್ಯಕಿರಣಗಳು ಸನ್ ಪ್ರೊಜೆಕ್ಟರಿನ ಪೈಪ್ ಮೂಲಕ ಹಾದು ಹೋಗುತ್ತದೆ. ನಂತರ ಲೆನ್ಸ್‌ನಲ್ಲಿ ಬಂದು ಕೆಳಗಡೆಯ ಸನ್‌ಮೈಕ್ ಪ್ಲೇಟ್‌ನಲ್ಲಿ ಪ್ರತಿಫಲನಗೊಳ್ಳುತ್ತದೆ.ಚಂದ್ರ ಮತ್ತು ಸೂರ್ಯಎರಡೂ ಒಂದೇ ಪ್ಲೇಟ್‌ನಲ್ಲಿ ಕಾಣುತ್ತವೆ. ಸೂರ್ಯ ಬಿಳಿಬಣ್ಣದಲ್ಲಿ ಹಾಗೂ ಚಂದ್ರ ಕಡುಕಪ್ಪು ಬಣ್ಣದಲ್ಲಿ ಮೂಡುತ್ತದೆ. ಹೀಗೆ ಸನ್ ಪ್ರೊಜೆಕ್ಟರ್ ಮೂಲಕ ಗ್ರಹಣ ವೀಕ್ಷಣೆ ಮಾಡಬಹುದು’ ಎಂದುಸದಸ್ಯ ಕಾರ್ಯದರ್ಶಿಸಂಜೀವ ದೇಶಪಾಂಡೆ ತಿಳಿಸಿದರು.

ADVERTISEMENT

‘ಗುರುವಾರ ಬೆಳಿಗ್ಗೆ 8ರಿಂದ 11.30ರವರೆಗೆ ಮಕ್ಕಳಿಗೆ ವಿಜ್ಞಾನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 11.30ರಿಂದ ಸೂರ್ಯಗ್ರಹಣದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅಗತ್ಯ ಸಲಕರಣೆಗಳು ಈಗಾಗಲೇವಿಜ್ಞಾನ ಕೇಂದ್ರಕ್ಕೆ ಸರಬರಾಜಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು’ ಎಂದುಹೇಳಿದರು.

39 ವರ್ಷದನಂತರಕರಾವಳಿಗೆ:ಡಿ.26ರಂದು ಆಗಲಿರುವ ‘ಕಂಕಣ ಸೂರ್ಯಗ್ರಹಣ’ವುಜಿಲ್ಲೆಯ ಕರಾವಳಿ ಜನರಿಗೆ ವಿಶೇಷ ಎನಿಸಲಿದೆ. ಚಂದ್ರನ ಗಾಢವಾದ ನೆರಳು 39 ವರ್ಷಗಳ ಬಳಿಕ ಈ ಭಾಗದಲ್ಲಿ ಬೀಳಲಿದೆ. 1980ರಲ್ಲಿ ಆಗಿದ್ದ ಖಗ್ರಾಸ ಸೂರ್ಯಗ್ರಹಣವು ಅಂಕೋಲಾದಲ್ಲಿ 2.50 ನಿಮಿಷ ಸಂಪೂರ್ಣವಾಗಿ ಗೋಚರಿಸಿತ್ತು. ಮುಂದಿನ ಕಂಕಣ ಸೂರ್ಯಗ್ರಹಣವನ್ನು ರಾಜ್ಯದಲ್ಲಿ ನೋಡಲು 2064ರ ಫೆ.17ರವರೆಗೆ ಕಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.