ADVERTISEMENT

ಭಾರತದಲ್ಲಿ ಟಿಬೆಟ್ ಪರಂಪರೆ ಜೀವಂತ: ದಲೈ ಲಾಮಾ

6 ವರ್ಷಗಳ ಬಳಿಕ ಭೇಟಿ ನೀಡಿದ ದಲೈಲಾಮಾ:ಭಾವುಕರಾದ ಬೌದ್ಧ ಬಿಕ್ಕುಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 17:56 IST
Last Updated 12 ಡಿಸೆಂಬರ್ 2025, 17:56 IST
<div class="paragraphs"><p>ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ ಶುಕ್ರವಾರ ಆಗಮಿಸಿದ ದಲೈಲಾಮಾ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು. </p></div>

ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ ಶುಕ್ರವಾರ ಆಗಮಿಸಿದ ದಲೈಲಾಮಾ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು.

   

ಮುಂಡಗೋಡ: ‘ಟಿಬೆಟ್‌ನ ಪರಂಪರೆಯನ್ನು ಚೀನಾ ಹಾಳು ಮಾಡಲು ಪ್ರಯತ್ನಿಸಿತು. ಆದರೆ, ಭಾರತದಲ್ಲಿ ಬೌದ್ಧ ಅಧ್ಯಯನವನ್ನು ನಿರಂತರವಾಗಿ ಮಾಡುತ್ತ, ಟಿಬೆಟ್ ಪರಂಪರೆಯನ್ನು ಜೀವಂತವಾಗಿಡಲು ಸಾಧ್ಯವಾಗಿದೆ’ ಎಂದು ಟಿಬೆಟಿಯನ್ ಧಾರ್ಮಿಕ ನಾಯಕ 14ನೇ ದಲೈ ಲಾಮಾ ಹೇಳಿದರು.

ಇಲ್ಲಿನ ಟಿಬೆಟ್‌ ಕ್ಯಾಂಪ್‌ಗೆ ಶುಕ್ರವಾರ ಆಗಮಿಸಿ ಬೌದ್ಧ ಮಂದಿರದ ಸಭಾಂಗಣದಲ್ಲಿ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಳಂದಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಬಿಕ್ಕುಗಳು ನಿರಂತರ ಅಧ್ಯಯನ ಮಾಡಬೇಕು’ ಎಂದರು.

ADVERTISEMENT

‘ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬೌದ್ಧ ಅಧ್ಯಯನ ಅವಶ್ಯ. ಬೌದ್ಧ ತತ್ವ ಮತ್ತು ವಿಜ್ಞಾನ ನಡುವೆ ಸಂಬಂಧವಿದೆ. ಬೌದ್ಧ ಅಧ್ಯಯನದಲ್ಲಿ ಹಲವು ವಿಜ್ಞಾನಿಗಳು ಆಸಕ್ತಿ ತೋರುತ್ತಿರುವುದು ಇದಕ್ಕೆ ಸಾಕ್ಷಿ. ನಾನು 130 ವರ್ಷಗಳವರೆಗೆ ಬದುಕುತ್ತೇನೆ’ ಎಂದರು.

ಇದಕ್ಕೂ ಮುನ್ನ ಆರು ವರ್ಷಗಳ ಬಳಿಕ ಭೇಟಿ ನೀಡಿದ ದಲೈ ಲಾಮಾ ಅವರನ್ನು ಬೌದ್ಧ ಮುಖಂಡರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕೈಯಲ್ಲಿ ಬಿಳಿ ರುಮಾಲು (ಖತಾ) ಹಿಡಿದು ಬಿಕ್ಕುಗಳು ನಮಸ್ಕರಿಸಿದರು.

ಮುಂಡಗೋಡ ತಾಲ್ಲೂಕಿಗೆ ಆಗಮಿಸಿದ ದಲೈಲಾಮಾ ಅವರನ್ನು ಟಿಬೆಟನ್‌ ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣದೊಂದಿಗೆ ನೃತ್ಯದ ಮೂಲಕ ಸ್ವಾಗತಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.