ಕಾರವಾರ: ಜಿಲ್ಲೆಗೆ ಮಹಾರಾಷ್ಟ್ರ ಮತ್ತು ಕತಾರ್‌ನಿಂದ ವಾಪಸಾದಇಬ್ಬರಲ್ಲಿ ಕೋವಿಡ್ 19 ಶನಿವಾರ ದೃಢಪಟ್ಟಿದೆ. 61 ವರ್ಷದ ಮಹಿಳೆ ಮತ್ತು 34 ವರ್ಷದ ಪುರುಷನಲ್ಲಿ ಹೊಸದಾಗಿ ಸೋಂಕು ಖಚಿತವಾಗಿದೆ.
ಮಹಿಳೆಯುಮಹಾರಾಷ್ಟ್ರದ ಘಾಟ್ಲಾದಿಂದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ‘ಎಸ್ 8’ ಬೋಗಿಯಲ್ಲಿ ಜೂನ್ 3ರಂದು ತಮ್ಮ ಪತಿಯೊಂದಿಗೆ ಕಾರವಾರಕ್ಕೆ ಪ್ರಯಾಣಿಸಿದ್ದರು. ನಗರಕ್ಕೆ ಬಂದ ಬಳಿಕ ಅವರ ಗಂಟಲುದ್ರವ ಸಂಗ್ರಹಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು.
ಕತಾರ್ ದೇಶದ ದೋಹಾದಿಂದ ಬೆಂಗಳೂರಿಗೆ ಪತ್ನಿಯ ಜೊತೆಗೆ ಬಂದಿದ್ದ ಕಾರವಾರದ ವ್ಯಕ್ತಿಯಲ್ಲೂ ಕೋವಿಡ್ ದೃಢಪಟ್ಟಿದೆ. ಮೇ 22ರಂದು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆಗ ಅವರ ಗಂಟಲುದ್ರವದ ಪರೀಕ್ಷೆಯಲ್ಲಿ ಕೋವಿಡ್ ಪತ್ತೆಯಾಗಿರಲಿಲ್ಲ. ಹಾಗಾಗಿ ಅವರನ್ನು ಮನೆಗೆ ಕಳುಹಿಸಲಾಗಿತ್ತು.
ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ನಲ್ಲಿ ಮೇ 30ರಂದು ಪ್ರಯಾಣಿಸಿ, 31ರಂದು ಶಿರಸಿಗೆ ಬಂದು ಅಲ್ಲಿಂದ ಕಾರವಾರದ ತಮ್ಮ ಮನೆಗೆ ಬಂದಿದ್ದರು. ಅವರಿಗೆ ಜ್ವರದ ಲಕ್ಷಣಗಳು ಕಂಡುಬಂದ ಕಾರಣ ಗಂಟಲುದ್ರವದ ಪರೀಕ್ಷೆ ಮಾಡಲಾಯಿತು. ಬಳಿಕ ಅವರಲ್ಲಿ ಕೋವಿಡ್ ದೃಢಪಟ್ಟಿದೆ. ಪ್ರಸ್ತುತ ಜಿಲ್ಲೆಯಲ್ಲಿ36 ಸಕ್ರಿಯ ಪ್ರಕರಣಗಳಿದ್ದು,58 ಮಂದಿ ಗುಣಮುಖರಾಗಿದ್ದಾರೆ.
18 ಮಂದಿ ಗುಣಮುಖ: ಕಾರವಾರ ವೈದ್ಯಕೀಯ ಕಾಲೇಜುಗಳ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 18 ಮಂದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಅವರ ಮಾಹಿತಿಯುಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಪ್ರಕಟವಾಗಬೇಕಿದೆ.
ಶನಿವಾರ ಬಿಡುಗಡೆಯಾದವರ ಪೈಕಿ ಒಂದು ವರ್ಷದ ಗಂಡು ಮಗು ಸೇರಿದಂತೆ ಆರು ಮಕ್ಕಳು,ಎಂಟು ಮಂದಿ ಪುರುಷರು, ನಾಲ್ವರು ಮಹಿಳೆಯರಿದ್ದಾರೆ. ಹೊನ್ನಾವರ ತಾಲ್ಲೂಕಿನ ನಾಲ್ವರು, ಶಿರಸಿಯ ಐವರು, ಯಲ್ಲಾಪುರದ ನಾಲ್ವರು, ಕುಂದಾಪುರದ ಇಬ್ಬರು, ಹಳಿಯಾಳ, ಸಿದ್ದಾಪುರ ಹಾಗೂ ಕರಕುಂಡೆಯ ತಲಾ ಒಬ್ಬರು ಸೋಂಕು ಮುಕ್ತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.