ಹೊನ್ನಾವರ: ತಾಲ್ಲೂಕಿನ ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇರೊಳ್ಳಿ ಸಮೀಪ ಶರಾವತಿ ನದಿಯಲ್ಲಿ ದೋಣಿಯಲ್ಲಿ ನಡೆಸಲಾಗುತ್ತಿದ್ದ ಅನಧಿಕೃತ ಹೋಟೆಲ್‍ನ್ನು ತಾಲ್ಲೂಕಾಡಳಿತ ಸದ್ಯ ಬಂದ್ ಮಾಡಿಸಿದ್ದು, ದೋಣಿಯನ್ನು ವಶಕ್ಕೆ ಪಡೆದಿದೆ.
‘ಹೋಟೆಲ್ ನಡೆಸಲು ಪ್ರವಾಸೋದ್ಯಮ ಇಲಾಖೆಯ ಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ತಹಶೀಲ್ದಾರ ಕಚೇರಿಯ ಅಧಿಕಾರಿಯೋರ್ವರು ತಿಳಿಸಿದರು.
‘ಮಂಜುನಾಥ ಗೋಯ್ದು ಗೌಡ ಎನ್ನುವವರು ಎರಡು ಯಾಂತ್ರೀಕೃತ ದೋಣಿ ಬಳಸಿಕೊಂಡು ಅನಧಿಕೃತವಾಗಿ ಯಾವುದೇ ಸುರಕ್ಷಾ ಕ್ರಮ ಅನುಸರಿಸರದೆ ಹೋಟೆಲ್ ನಡೆಸುತ್ತಿದ್ದು ನದಿಯಲ್ಲಿ ಹೋಟೆಲ್ ನಡೆಸುತ್ತಿರುವುದರಿಂದ ನದಿ ನೀರು ಕಲುಷಿತಗೊಂಡು ಪರಿಸರಕ್ಕೂ ಹಾನಿಯಾಗಿದೆ’ ಎಂದು ಬೇರೊಳ್ಳಿಯ ರವೀಂದ್ರ ಪ್ರಭು ಎನ್ನುವವರು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏ.15ರಂದು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಸಲ್ಲಿಸಿದ್ದರು. ರಿಟ್ ಅರ್ಜಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದು ಬುಧವಾರ ಹೊಟೆಲ್ ಬಂದ್ ಮಾಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.