ಉತ್ತರ ಕನ್ನಡದ ಅಘನಾಶಿನಿಯ ನಿವಾಸಿ ಮಾರುತಿ ಗೌಡ, ಕಪ್ಪೆಚಿಪ್ಪು ಸಂಗ್ರಹಕಾರರ ಪರ ಹೋರಾಡಿದವರು. ಕಪ್ಪೆ ಚಿಪ್ಪು ಸಂಗ್ರಹಿಸಲು ಹೋದಾಗ ಅಪಘಾತಕ್ಕೆ ಈಡಾಗುತ್ತಿದ್ದವರ ಕುಟುಂಬಗಳು ಬೀದಿಗೆ ಬರುತ್ತಿದ್ದುದನ್ನು ಕಂಡ ಅವರು, ಕಪ್ಪೆಚಿಪ್ಪು ಸಂಗ್ರಹಕಾರರಿಗೂ ಮೀನುಗಾರರ ಸ್ಥಾನ–ಮಾನ ಸಿಗುವಂತೆ ಮಾಡಿ, ಸರ್ಕಾರದಿಂದ ಸೌಲಭ್ಯ ಅಥವಾ ಪರಿಹಾರ ದೊರಕುವಂತೆ ಮಾಡಿದವರು. ಕಪ್ಪೆಚಿಪ್ಪು ಸಂಗ್ರಹವನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿರುವ 3,500ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗುವಂತಹ ಕೆಲಸವನ್ನು ಮಾರುತಿಗೌಡ ಮಾಡಿದ್ದಾರೆ. ಕೇವಲ 1.19 ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದು, 64 ಎಕರೆ ಕೃಷಿ ಭೂಮಿಯಲ್ಲಿ ಚಿಪ್ಪಿ ಗಣಿಗಾರಿಕೆ ಮಾಡುತ್ತಿದ್ದ ಗಣಿ ಕಂಪನಿಯ ಅಕ್ರಮವನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದುಕೊಂಡು, ಆ ಕೃಷಿ ಭೂಮಿ ಮತ್ತೆ ರೈತರಿಗೆ ಸೇರುವಂತೆ ಮಾಡಿದವರು ಮಾರುತಿ ಗೌಡ. ಅವರ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.