ADVERTISEMENT

ಜೊಯಿಡಾದ ರಾಘವೇಂದ್ರ ಜ್ಯೂಸ್ ಶಾಪ್‌ನಲ್ಲಿ ದಾಹ ತಣಿಸುವ ವಿಧವಿಧ ಶರಬತ್ತು

ಜ್ಞಾನೇಶ್ವರ ಜಿ.ದೇಸಾಯಿ
Published 3 ಮೇ 2019, 19:45 IST
Last Updated 3 ಮೇ 2019, 19:45 IST
ಜೊಯಿಡಾದ ರಾಘವೇಂದ್ರ ಜ್ಯೂಸ್ ಶಾಪ್‌ನಲ್ಲಿ ಕೋಕಂ ಶರಬತ್ತು ಸಿದ್ಧಪಡಿಸುತ್ತಿರುವ ನರೇಂದ್ರ
ಜೊಯಿಡಾದ ರಾಘವೇಂದ್ರ ಜ್ಯೂಸ್ ಶಾಪ್‌ನಲ್ಲಿ ಕೋಕಂ ಶರಬತ್ತು ಸಿದ್ಧಪಡಿಸುತ್ತಿರುವ ನರೇಂದ್ರ   

ಜೊಯಿಡಾ:ಬಿರುಬೇಸಿಗೆಯಲ್ಲಿ ತಂಪಾದ ಪಾನೀಯ ಬೇಕೆಂದು ಬಯಸುವುದು ಸಹಜ. ರಾಸಾಯನಿಕರಹಿತ, ಶುಚಿರುಚಿಯಾದ ಶರಬತ್ತು ಸಿಕ್ಕಿದರೆ ಇನ್ನೂ ಖುಷಿ. ಇಲ್ಲಿನ ರಾಘವೇಂದ್ರ ಜ್ಯೂಸ್ ಶಾಪ್ ಇದೇ ಕಾರಣಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ಸಿಗುವ ವಿವಿಧ ಶರಬತ್ತುಗಳು ಔಷಧೀಯ ಗುಣಗಳನ್ನೂ ಒಳಗೊಂಡಿದೆ.

ಮುರುಗನ (ಕೋಕಂ) ಹಣ್ಣಿನ ಶರಬತ್ತು ಪಿತ್ತ ನಿವಾರಣೆ ಮಾಡುತ್ತದೆ. ಪಾಚಕ್ ಆ್ಯಸಿಡಿಟಿಗೆ ರಾಮಬಾಣ. ನಿಂಬೆ ರಸ ಬೆರೆಸಿದ ಕಬ್ಬಿನ ಹಾಲು, ಲಿಂಬುಸೋಡಾ, ಲಸ್ಸಿ ಕೂಡ ಗ್ರಾಹಕರನ್ನು ಸೆಳೆಯುತ್ತವೆ. ಇದರೊಂದಿಗೆವಾಟೆಹುಳಿ, ಅಪ್ಪೆಹುಳಿ, ನೆಲ್ಲಿಕಾಯಿ, ಶುಂಠಿ ಚಾಟ್ ಮುಂತಾದ ರುಚಿಯಾದ ಆಹಾರವೂ ಇವೆ.

ಅಂಗಡಿಯ ಮಾಲೀಕ ನರೇಂದ್ರ ತಮ್ಮ ಆಹಾರ ವ್ಯವಹಾರ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸುತ್ತಾರೆ. ‘ಭರ್ಜರಿ ಭೋಜನದ ಬಳಿಕಹೊಟ್ಟೆ ಕೆಡಿಸಿಕೊಂಡಲ್ಲಿಪಾಚಕ್ ಕೆಲವೇ ನಿಮಿಷಗಳಲ್ಲಿ ತೊಂದರೆ ಶಮನಗೊಳಸುತ್ತದೆ. ಈ ರೀತಿಯ ಸ್ಥಳೀಯ ಪದಾರ್ಥಗಳ ಪಾನೀಯ, ಆಹಾರ ಸೇವನೆಯಿಂದ ಆರೋಗ್ಯಕ್ಕೂ ಹಾನಿಯಿಲ್ಲ’ ಎನ್ನುತ್ತಾರೆ.

ADVERTISEMENT

ಮೊದಲಿನ ಸೂಪಾ ತಾಲ್ಲೂಕು ಮುಳುಗಡೆಯಾಗಿಅತಂತ್ರರಾದವರಲ್ಲಿ ನರೇಂದ್ರ ಅವರ ತಂದೆ ಮಾರುತಿ ಕೂಡ ಒಬ್ಬರಾಗಿದ್ದರು. ಬೆಳಗಾವಿಯ ತಮ್ಮ ಮಿತ್ರ ಚಂದ್ರಶೇಖರ ತೋರವತ ಎಂಬುವರಿಂದ ಪ್ರೇರಣೆ ಪಡೆದು, 50 ವರ್ಷಗಳ ಹಿಂದೆಯೇ ಜೊಯಿಡಾದಲ್ಲಿ ತಂಪುಪಾನೀಯದ ಅಂಗಡಿ ಆರಂಭಿಸಿದ್ದರು. ಅವರ ನಿಧನದ ನಂತರ ಪುತ್ರ ನರೇಂದ್ರಮುಂದುವರಿಸುತ್ತಿದ್ದಾರೆ. ಯಾವುದೇ ಕೃತಕ ಪದಾರ್ಥ ಬೆರೆಸದೇನೈಸರ್ಗಿಕವಾಗಿ ಲಭಿಸುವಪಾನೀಯ ಪದಾರ್ಥಗಳನ್ನೇ ಬಳಕೆ ಮಾಡುತ್ತಾರೆ.

ಬೆಳಗಾವಿ ಮಾರ್ಗವಾಗಿ ಕಾರವಾರಕ್ಕೆ ಹೋಗಿ ಬರುವವರಿಗೆ, ಉಳವಿ ದೇವಸ್ಥಾನ, ಗೋವಾಕ್ಕೆಪ್ರಯಾಣ ಮಾಡುವವರಿಗೆ ಮಾರ್ಗಮಧ್ಯದಲ್ಲಿ ಜೊಯಿಡಾಸಿಗುತ್ತದೆ. ಇಲ್ಲಿ ನರೇಂದ್ರಅವರ ಅಂಗಡಿ ತುಸು ವಿಶ್ರಾಂತಿಯ ಜಾಗವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.