ADVERTISEMENT

‘ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ– 2021’ಕ್ಕೆ ವಾಸುದೇವ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 12:24 IST
Last Updated 8 ಆಗಸ್ಟ್ 2021, 12:24 IST
‘ವರ್ಲ್ಡ್ ರೆಕಾರ್ಡ್ ಇಂಡಿಯಾ– 2021’ರ ಪ್ರಮಾಣ ಪತ್ರ, ಪ್ರಶಸ್ತಿ ಹಾಗೂ ತಮ್ಮ ಸಂಗ್ರಹದ ನಾಣ್ಯಗಳೊಂದಿಗೆ ಕಾರವಾರದ ಶೇಜವಾಡದ ವಾಸುದೇವ ಅನಂತ ಹರ್ಚಿಕರ್
‘ವರ್ಲ್ಡ್ ರೆಕಾರ್ಡ್ ಇಂಡಿಯಾ– 2021’ರ ಪ್ರಮಾಣ ಪತ್ರ, ಪ್ರಶಸ್ತಿ ಹಾಗೂ ತಮ್ಮ ಸಂಗ್ರಹದ ನಾಣ್ಯಗಳೊಂದಿಗೆ ಕಾರವಾರದ ಶೇಜವಾಡದ ವಾಸುದೇವ ಅನಂತ ಹರ್ಚಿಕರ್   

ಕಾರವಾರ: ಅಪರೂಪದ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ತಾಲ್ಲೂಕಿನ ಶೇಜವಾಡದ ನಿವಾಸಿ ವಾಸುದೇವ ಅನಂತ ಹರ್ಚಿಕರ್ ‘ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ–2021’ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರು 2006ರಿಂದ 2020ರವರೆಗೆ ದೇಶದಲ್ಲಿ ಬಿಡುಗಡೆಯಾಗಿರುವ 21 ವಿಧಗಳ ನಾಣ್ಯಗಳನ್ನು ತಮ್ಮ ಸಂಗ್ರಹದಲ್ಲಿ ಹೊಂದಿದ್ದಾರೆ.

ಅವರು ನಗರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಮೂರು ವರ್ಷಗಳಿಂದ ನಾಣ್ಯ ಸಂಗ್ರಹದ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕಾಲು ಆಣೆ, ಅರ್ಧ ಆಣೆ, ಎರಡೂ ಕಾಲು ಆಣೆ, ಕಾಲು ಟಾಂಗಾ, ಅರ್ಧ, ಒಂದು, ಎರಡು, ಮೂರು, 10, 20, 25, 50 ಪೈಸೆಗಳು ಅವರ ಸಂಗ್ರಹದಲ್ಲಿವೆ.

ಈಗ ಬಳಕೆಯಲ್ಲಿರುವ ₹ 1, ₹ 2, ₹ 5 ಹಾಗೂ ₹ 10 ಮೌಲ್ಯದ ನಾಣ್ಯಗಳು, ಸಾಂದರ್ಭಿಕವಾಗಿ ಬಿಡುಗಡೆ ಮಾಡಲಾದ ₹ 20 ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ನಾಣ್ಯಗಳನ್ನು ಹೊಂದಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್, ನೇಪಾಳ, ಶ್ರೀಲಂಕಾ, ಮಲೇಷ್ಯಾ, ಇರಾನ್, ಇರಾಕ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ ಮುಂತಾದ ವಿವಿಧ ದೇಶಗಳ ನಾಣ್ಯಗಳನ್ನೂ ಸಂಗ್ರಹಿಸಿ ಗಮನ ಸೆಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.