ADVERTISEMENT

ತರಕಾರಿ ದರದಲ್ಲಿ ಗಮನಾರ್ಹ ಇಳಿಕೆ

ಹೊರರಾಜ್ಯದಿಂದ ಮೀನುಗಳ ಆವಕ: ಈರುಳ್ಳಿ ಕೆ.ಜಿ.ಗೆ ₹ 30

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 12:23 IST
Last Updated 27 ಫೆಬ್ರುವರಿ 2020, 12:23 IST
ಕಾರವಾರದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಿದ್ಧವಾಗಿರುವ ಹಣ್ಣಿನ ವ್ಯಾಪಾರಿ
ಕಾರವಾರದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಿದ್ಧವಾಗಿರುವ ಹಣ್ಣಿನ ವ್ಯಾಪಾರಿ   

ಕಾರವಾರ: ನಗರದ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ಸ್ಥಿರವಾಗಿದ್ದ ದರವು ಈಗ ಇಳಿಮುಖಗೊಂಡಿದೆ. ಆವಕ ಹೆಚ್ಚಾಗುತ‌್ತಿರುವುದೇ ಇದಕ್ಕೆ ಕಾರಣ ಎಂದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಪ್ರತಿ ಕೆ.ಜಿ.ಗೆ₹ 40ರಲ್ಲಿ ಬಿಕರಿಯಾಗುತ್ತಿದ್ದ ಈರುಳ್ಳಿ₹ 10ರಷ್ಟು ಇಳಿಕೆ ಕಂಡು₹ 30ರ ದರದಲ್ಲಿ ವಹಿವಾಟು ಕಾಣುತ್ತಿದೆ. ಟೊಮೆಟೊ ₹ 20ರಲ್ಲೇ ಸ್ಥಿರವಾಗಿದ್ದರೆ, ಕ್ಯಾರೆಟ್₹ 70 ರಿಂದ₹ 50ಕ್ಕೆ ಇಳಿಕೆಯಾಗಿದೆ. ಹೂಕೋಸು ₹ 30, ಕ್ಯಾಬೇಜ್₹ 20, ಆಲೂಗಡ್ಡೆ₹ 30ರ ದರ ಹೊಂದಿವೆ.₹ 50ರಲ್ಲಿ ಮಾರಾಟವಾಗುತ್ತಿದ್ದ ಬೀನ್ಸ್₹ 10ರಷ್ಟು ಇಳಿಕೆ ಕಂಡಿದೆ.ಕ್ಯಾಪ್ಸಿಕಂ ₹ 50, ಮೆಣಸಿನಕಾಯಿ ₹ 50, ಬೀಟ್‌ರೂಟ್₹ 40, ಬೆಂಡೆಕಾಯಿ₹ 40 ಬೆಲೆಯಲ್ಲಿ ಬಿಕರಿಯಾಗುತ್ತಿದೆ.

ಹಿಂದಿನ ವಾರ ಪಾಮ್ ಆಯಿಲ್‌ ಪ್ರತಿ ಲೀಟರ್‌ಗೆ₹ 100ರ ಬೆಲೆ ಹೊಂದಿತ್ತು. ಸದ್ಯ ಗಮನಾರ್ಹ ಇಳಿಕೆ ಕಂಡಿದ್ದು₹ 90ರಲ್ಲಿ ಗ್ರಾಹಕ ಖರೀದಿಸುತ್ತಿದ್ದಾನೆ. ಹಸಿರು ಬಟಾಣಿಗೆ ₹ 160, ಬ್ಯಾಡಗಿ ಮೆಣಸು ಪ್ರತಿ ಕೆ.ಜಿ.ಗೆ ₹ 220 ಹಾಗೂ ಉತ್ತಮ ಗುಣಮಟ್ಟದ್ದು ₹ 240ರ ದರ ಹೊಂದಿದೆ. ಸ್ವಸ್ತಿಕ್ ಅಕ್ಕಿ 25 ಕೆ.ಜಿ.ಯ ಚೀಲಕ್ಕೆ ₹ 900,ಹಳೆಅಕ್ಕಿಗೆ ₹ 1,000 ಇದೆ. ಜೋಳದ ಬೆಲೆಯಲ್ಲಿಯೂ₹ 10ರಷ್ಟು ಇಳಿಕೆಯಾಗಿದ್ದು ಪ್ರತಿ ಕೆ.ಜಿ.ಗೆ₹ 38 ಇದೆ.

ADVERTISEMENT

ಹಸಿರು ದ್ರಾಕ್ಷಿಯು ದರದಲ್ಲಿ ಶಿವರಾತ್ರಿ ಸಮಯದಲ್ಲಿ ₹ 120ಕ್ಕೇರಿತ್ತು. ಸದ್ಯ ಅರ್ಧದಷ್ಟು ಇಳಿಕೆಗೊಂಡು₹ 70ರಲ್ಲಿ ಬಿಕರಿಯಾಗುತ್ತಿದೆ.ಕಪ್ಪು ದ್ರಾಕ್ಷಿಯ ದರದಲ್ಲೂ ಭಾರಿ ಇಳಿಕೆಯಾಗಿದೆ. ಪ್ರತಿ ಕೆ.ಜಿ.ಗೆ ₹ 180 ಇದ್ದ ದರವು ಈಗ₹ 120ಇದೆ. ಮೂಸುಂಬಿ₹ 70, ದಾಳಿಂಬೆ₹ 120, ಸಪೋಟಾ₹ 100ರಲ್ಲಿ ಗ್ರಾಹಕ ಕೊಂಡುಕೊಳ್ಳುತ್ತಿದ್ದಾನೆ. ಇರಾನಿ ಸೇಬು ₹ 200ರಿಂದ₹ 160ಕ್ಕೆ ಇಳಿಕೆ ಕಂಡಿದೆ.

ಸುವರ್ಣಗಡ್ಡೆ ಒಂದಕ್ಕೆ ₹ 200ರ ದರವಿದೆ. ದೊಡ್ಡ ಗಾತ್ರದ ಮಾವಿನಕಾಯಿ ₹ 100ಕ್ಕೆ ನಾಲ್ಕು, ಮಂಡ್ಯದಿಂದ ಆವಕವಾಗುವ ಬೆಲ್ಲ ₹ 48, ಮಹಾಲಿಂಗಪುರದ ಬೆಲ್ಲ ₹ 50, ಜೋನಿಬೆಲ್ಲ ₹ 80, ಜೇನುತುಪ್ಪ ₹ 270ರಲ್ಲಿ ಬಿಕರಿಯಾಗುತ್ತಿವೆ.

ಕುಂದಾಪುರದಿಂದ ಆವಕಗೊಂಡ ಕಲ್ಲಂಗಡಿ ಹಣ್ಣನ್ನು ಕೆ.ಜಿ.ಗೆ ₹ 20ರ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದೊಡ್ಡ ಗಾತ್ರದ ಒಂದು ಹಣ್ಣಿಗೆ ₹ 100ರವರೆಗೂ ಬೆಲೆಯಿದೆ. ಆಂಧ್ರಪ್ರದೇಶದಿಂದ ಆವಕಗೊಂಡಿರುವ ಸಣ್ಣ ಗಾತ್ರದ ಕಲ್ಲಂಗಡಿ. ದರವು ₹ 70ರಿಂದ₹ 100ರವರೆಗೆ ಇದೆ.

ಬಂಗಡೆ ₹100ಕ್ಕೆ ಐದು ಸಿಗುತ್ತಿದೆ. ಪಾಂಫ್ರೆಟ್ಕೆ.ಜಿ.ಗೆ₹ 800, ಲುಸ್ಕಾ ಒಂದು ಪಾಲಿಗೆ ₹ 200, ಬೆಳುಂಜೆ ₹ 100, ಲೆಪ್ಪೆ ₹ 100ರ ದರ ಹೊಂದಿವೆ. ಫಾರಂ ಕೋಳಿಯ ದರ ₹ 180, ನಾಟಿಕೋಳಿಗೆ ₹ 700 ಇದೆ. ಮಟನ್ ಪ್ರತಿ ಕೆ.ಜಿ.ಗೆ ₹ 550 ಹಾಗೂ ಚಿಕನ್ ₹ 220ರಲ್ಲಿ ವ್ಯಾಪಾರವಾಗುತ್ತಿದೆ.ಒಂದು ಮೊಟ್ಟೆಗೆ₹ 5 ಹಾಗೂ ಬೇಯಿಸಿದ ಮೊಟ್ಟೆಗೆ₹ 8 ಇದೆ.

ಮೀನಿನ ಸಂಗ್ರಹವಿಲ್ಲ:ಕಾರವಾರ ಬಂದರಿನಲ್ಲಿ ಮೀನು ಸಂಗ್ರಹ ಮುಗಿದು ಎರಡು ವಾರಗಳೇ ಕಳೆದಿವೆ. ಮೀನಿಗೆ ಬರ ಎದುರಾಗಿದ್ದರಿಂದ ಕೇರಳ, ಮಡಗಾಂವ್, ಮಲ್ಪೆ ಮುಂತಾದ ಭಾಗಗಳಿಂದ ಆವಕ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ಎಂಟು ಲಾರಿಗಳಷ್ಟು ಮೀನುಗಳು ಮಾರುಕಟ್ಟೆಗೆ ಆವಕಗೊಂಡಿವೆ ಎಂದು ಮೀನುಗಾರ ವಿನಾಯಕ ಹರಿಕಂತ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.